ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಆರ್‌ಟಿಸಿ: ₹ 84 ಕೋಟಿ ಪಾವತಿಗೆ ಆದೇಶ

Published 16 ಮಾರ್ಚ್ 2024, 15:39 IST
Last Updated 16 ಮಾರ್ಚ್ 2024, 15:39 IST
ಅಕ್ಷರ ಗಾತ್ರ

ಬೆಂಗಳೂರು: ಕೆಎಸ್‌ಆರ್‌ಟಿಸಿ ಸಿಬ್ಬಂದಿಯ ತುಟ್ಟಿಭತ್ಯೆ ಹಿಂಬಾಕಿ, ಗಳಿಕೆ ರಜೆ ನಗದೀಕರಣ ಹಾಗೂ ಉಪಧನದ ಬಾಕಿ ಮೊತ್ತ ಒಟ್ಟು ₹84 ಕೋಟಿ ಪಾವತಿಸಲು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್‌ ಆದೇಶಿಸಿದ್ದಾರೆ.

2022-23ನೇ ಸಾಲಿನಲ್ಲಿ ಗಳಿಕೆ ರಜೆ ನಗದೀಕರಣದ ಮೊತ್ತ ₹24 ಕೋಟಿ, 2022ರ ಜುಲೈಯಿಂದ ನವೆಂಬರ್‌ವರೆಗಿನ 5 ತಿಂಗಳು, 2023ರ ಜನವರಿಯಿಂದ ಜುಲೈವರೆಗಿನ 7 ತಿಂಗಳು ಮತ್ತು ಜುಲೈಯಿಂದ ಅಕ್ಟೋಬರ್‌ವರೆಗೆ 4 ತಿಂಗಳ ಹಿಂಬಾಕಿ ತುಟ್ಟಿಭತ್ಯೆ ಮೊತ್ತ ₹54 ಕೋಟಿಯನ್ನು ಪಾವತಿಸಲು ಆದೇಶಿಸಲಾಗಿದೆ. ಈ ಅವಧಿಯಲ್ಲಿ ನಿವೃತ್ತರಾದವರಿಗೂ ಈ ಸೌಲಭ್ಯ ದೊರೆಯಲಿದೆ.

2024ರ ಜನವರಿಯಲ್ಲಿ ಸಂಸ್ಥೆಯ ಸೇವೆಯಿಂದ ನಿವೃತ್ತರಾದ ಸಿಬ್ಬಂದಿಯ ಉಪಧನ ₹6 ಕೋಟಿ ಮೊತ್ತವನ್ನು ಬಿಡುಗಡೆಗೊಳಿಸಲು ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT