ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೀಣ್ಯ ದಾಸರಹಳ್ಳಿ: ‘ಕುಹೂ ಕುಹೂ ಕೋಗಿಲೆ’ ನಾಟಕ ಪ್ರದರ್ಶನ

Published 23 ಮೇ 2024, 16:20 IST
Last Updated 23 ಮೇ 2024, 16:20 IST
ಅಕ್ಷರ ಗಾತ್ರ

ಪೀಣ್ಯ ದಾಸರಹಳ್ಳಿ: ಅಂದ್ರಹಳ್ಳಿಯ ವಿದ್ಯಾಮಾನ್ಯ ವಿದ್ಯಾ ಕೇಂದ್ರ ಶಾಲೆಯ ‘ವಿದ್ಯಾಮಾನ್ಯ ವಿಶುವಲ್ಸ್’ ರಂಗವೇದಿಕೆಯಲ್ಲಿ ಮಕ್ಕಳಿಂದ ‘ಕುಹೂ ಕುಹೂ ಕೋಗಿಲೆ’ಯ ನಾಟಕ ಕಲಾ ಪ್ರದರ್ಶನ ನಡೆಯಿತು.

ವಿದ್ಯಾಮಾನ್ಯ ವಿದ್ಯಾ ಕೇಂದ್ರದ ಗೌರವ ಸಂಸ್ಥಾಪಕ ರಮೇಶ ಸೌಂದರ್ಯ ಮತ್ತು ‘ಸಂಸ್ಕಾರ ಭಾರತಿ’ಯ ಶ್ರೀಪತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ದು ಉಚ್ಚಿಲ್ ನಿರ್ದೇಶನದಲ್ಲಿ, ದಿವಾಕರ್ ಕಟೀಲ್ ಅವರ ಸಂಗೀತದಲ್ಲಿ ‘ಕುಹೂ ಕುಹೂ ಕೋಗಿಲೆ’ ಮೂಡಿ ಬಂದಿತ್ತು.

ಮಂಜುನಾಥ್ ಬೇಲಿಕೆರೆ ಬರೆದು ರಚಿಸಿದ ಈ ನಾಟಕವು ಕಲಾರಸಿಕರ ಮನಸೂರೆಗೊಂಡಿತು. ‘ವಿದ್ಯಾಮಾನ್ಯ ವಿಶುವಲ್ಸ್’ ಮಕ್ಕಳಿಗೆ ರಂಗ ಶಿಕ್ಷಣವನ್ನು ಒದಗಿಸುವ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಉತ್ತೇಜನ ನೀಡುವುದು ಉದ್ದೇಶ’ ಎಂದು ರಮೇಶ್ ಸೌಂದರ್ಯ ತಿಳಿಸಿದರು.

ಶಾಲೆಯ ನಿರ್ದೇಶಕ ಭರತ್ ಸೌಂದರ್ಯ, ಪ್ರಾಂಶುಪಾಲರಾದ ಎನ್.ಕೆ. ಶಾರದಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT