ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಪುಷ್ಪ ಪ್ರದರ್ಶನ: ಭೇಟಿ ನೀಡುವವರಿಗೆ ನಮ್ಮ ಮೆಟ್ರೊದಿಂದ ಪೇಪರ್ ಟಿಕೆಟ್‌

Published 24 ಜನವರಿ 2024, 16:12 IST
Last Updated 24 ಜನವರಿ 2024, 16:12 IST
ಅಕ್ಷರ ಗಾತ್ರ

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಏರ್ಪಡಿಸಲಾಗಿರುವ ಫಲಪುಷ್ಬ ಪ್ರದರ್ಶನಕ್ಕೆ ಜ.26ರಂದು ಭೇಟಿ ನೀಡಲಿರುವ ಜನರ ಅನುಕೂಲಕ್ಕಾಗಿ ‘ನಮ್ಮ ಮೆಟ್ರೊ’ ರಿಟರ್ನ್‌ ಜರ್ನಿ ಪೇಪರ್‌ ಟಿಕೆಟ್‌ಗಳನ್ನು ನೀಡಲಿದೆ.

ಅಂದು ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ಲಾಲ್‌ಬಾಗ್‌ ಮೆಟ್ರೊ ನಿಲ್ದಾಣದಿಂದ ಯಾವುದೇ ಮೆಟ್ರೊ ನಿಲ್ದಾಣಕ್ಕೆ ಪ್ರಯಾಣಿಸಲು ₹ 30 ದರ ನಿಗದಿಪಡಿಸಲಾಗಿದೆ.

ಒಂದು ದಿನಕ್ಕೆ ಮಾತ್ರ ಮಾನ್ಯವಾಗಿರುವ ಪೇಪರ್‌ ಟಿಕೆಟ್‌ ಅನ್ನು ಜ.26ರಂದು ಬೆಳಿಗ್ಗೆ 8ರಿಂದ ಸಂಜೆ 6ರ ವರೆಗೆ ಎಲ್ಲ ಮೆಟ್ರೊ ನಿಲ್ದಾಣಗಳಲ್ಲಿ ಖರೀದಿಸಬಹುದು. ಲಾಲ್‌ಬಾಗ್‌ ಮೆಟ್ರೊ ನಿಲ್ದಾಣದಲ್ಲಿ ಮಾತ್ರ ಪೇಪರ್‌ ಟಿಕೆಟ್‌ ರಾತ್ರಿ 8ರವರೆಗೆ ಲಭ್ಯವಿರಲಿದೆ. 

ಸ್ಮಾರ್ಟ್ ಕಾರ್ಡ್‌, ಎನ್‌ಸಿಎಂಸಿ ಕಾರ್ಡ್‌ಗಳು, ಕ್ಯೂಆರ್ ಟಿಕೆಟ್‌ಗಳ ಮೂಲಕ ಪ್ರಯಾಣಿಸಬಹುದು ಎಂದು ಮೆಟ್ರೊ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT