ಶುಕ್ರವಾರ, ನವೆಂಬರ್ 15, 2019
27 °C

ಮರಗೆಲಸಕ್ಕೆ ಬಂದು 20 ಎಲ್‍ಇಡಿ ಟಿ.ವಿಗೆ ಕನ್ನ!

Published:
Updated:

ಬೆಂಗಳೂರು: ಟಿವಿ ಶೋ ರೂಂನ ಒಳಾಂಗಣ ವಿನ್ಯಾಸಕ್ಕೆ ಬಂದಿದ್ದ ಬಡಗಿ, ಅಲ್ಲಿ ಸಂಗ್ರಹಿಸಿ ಇಟ್ಟಿದ್ದ ₹ 3.66 ಲಕ್ಷ ಮೌಲ್ಯದ 20 ಎಲ್‍ಇಡಿ ಟಿ.ವಿಗಳನ್ನು ಕಳವು ಮಾಡಲು ಯತ್ನಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ!

ರಾಜಸ್ಥಾನದ ನಾಗೋರ್ ನಿವಾಸಿ ದೇವಾರಾಂ (22) ಬಂಧಿತ ಆರೋಪಿ. ಕದ್ದೊಯ್ದಿದ್ದ ಟಿವಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ನರೇಂದ್ರ ಎಂಬಾತ ಸೇರಿ ಇತರ ಇಬ್ಬರಿಗಾಗಿ ಬಂಡೇಪಾಳ್ಯ ಠಾಣೆ ಪೊಲೀಸರು ಹುಡುಕಾಡುತ್ತಿದ್ದಾರೆ.

ಚಂದಾಪುರದಲ್ಲಿ ದುರ್ಗಾರಾಂ ಎಂಬುವರು ಥಾಮ್ಸನ್ ಕಂಪನಿಯ ಟಿವಿ ಶೋ ರೂಂ ಆರಂಭಿಸುವ ಉದ್ದೇಶದಿಂದ ತಮ್ಮ ಅಂಗಡಿಯಲ್ಲಿ ಮರಗೆಲಸ ಮಾಡಿಸುತ್ತಿದ್ದರು. ಒಳಭಾಗದಲ್ಲಿ ಕೆಲಸಪೂರ್ಣಗೊಂಡ ಬಳಿಕ ಹೊಸ ಟಿವಿಗಳನ್ನು ಶೋ ರೂಂ ತಂದು ಇಡಲಾಗಿತ್ತು. ಅಂಗಡಿ ಹೊರಭಾಗದಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ, 20 ಟಿವಿ
ಗಳನ್ನು ಕದ್ದು, ಮಾಗಡಿ ರಸ್ತೆಯ ಟೋಲ್‍ಗೇಟ್‍ಗೆ ಬಳಿ ತಾನು ನೆಲೆಸಿದ್ದ ಬಾಡಿಗೆ ಮನೆಯಲ್ಲಿ ಇಟ್ಟಿದ್ದ. ಬಳಿಕ ಅವುಗಳನ್ನು ನರೇಂದ್ರ ಎಂಬಾತನ ಮೂಲಕ ಪುಣೆಯಲ್ಲಿ ಮಾರಾಟ ಮಾಡಲು ಸಂಚು ರೂಪಿಸಿದ್ದ.

ಪ್ರತಿಕ್ರಿಯಿಸಿ (+)