ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಿ ಮಾಲ್‌: ಶೇ 50ರಷ್ಟು ತೆರಿಗೆ ಪಾವತಿಸಲು ಆದೇಶ

Published 15 ಮೇ 2024, 17:40 IST
Last Updated 15 ಮೇ 2024, 17:40 IST
ಅಕ್ಷರ ಗಾತ್ರ

ಬೆಂಗಳೂರು: ‘ಮಂತ್ರಿ ಸ್ಕ್ವೇರ್‌ ಮಾಲ್‌ ತನ್ನ ಆಸ್ತಿ ತೆರಿಗೆಯ ಬಾಕಿ ಮೊತ್ತದಲ್ಲಿನ ಶೇ 50ರಷ್ಟನ್ನು ಹತ್ತು ದಿನಗಳಲ್ಲಿ ಪಾವತಿಸಬೇಕು. ಬಾಕಿ ಪಾವತಿಸಿದ ನಂತರವೇ ಎಲ್ಲ ನಿರ್ಬಂಧಗಳನ್ನು ತೆರವುಗೊಳಿಸಿ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ಸಿಟಿ ಸಿವಿಲ್‌ ನ್ಯಾಯಾಲಯ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಆದೇಶಿಸಿದೆ.

ಈ ಸಂಬಂಧ ಮಂತ್ರಿ ಗ್ರೂಪ್‌ ಶಾಖೆಯಾದ ಅಭಿಷೇಕ್ ಪ್ರಾಪ್‌ ಬಿಲ್ಡ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಈ ಕುರಿತಂತೆ ಆದೇಶಿಸಿದೆ.

ತೆರಿಗೆ ಬಾಕಿಯಲ್ಲಿ ಶೇ 50ರಷ್ಟನ್ನು 10 ದಿನಗಳಲ್ಲಿ ಪಾವತಿಸಿದರೆ ಇಡೀ ಮಾಲ್‌ನ ಬೀಗ ತೆರೆಯುವಂತೆ ಬಿಬಿಎಂಪಿಗೆ ಸೂಚಿಸಿದೆ. 2024ರ ಜುಲೈ 31 ರೊಳಗೆ ಉಳಿದ ಶೇ 50ರಷ್ಟು ಮೊತ್ತವನ್ನು ಪಾವತಿಸುವಂತೆ ಅರ್ಜಿದಾರರಿಗೆ ನಿರ್ದೇಶಿಸಿದೆ. ಪ್ರಸಕ್ತ ವರ್ಷದ ಮೇ ವೇಳೆಗೆ, ಮಂತ್ರಿ ಸ್ಕ್ವೇರ್ ಮಾಲ್ ₹ 52 ಕೋಟಿ ಆಸ್ತಿ ತೆರಿಗೆಯನ್ನು ಪಾವತಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT