ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾವಳ್ಳಿಪುರದ ಕಸ ಶೀಘ್ರ ವಿಲೇವಾರಿ’

Last Updated 4 ಸೆಪ್ಟೆಂಬರ್ 2019, 12:47 IST
ಅಕ್ಷರ ಗಾತ್ರ

ಹೆಸರಘಟ್ಟ: ದಾಸನಪುರ ಹೋಬಳಿಯ ಮಾಚೋಹಳ್ಳಿ ಗ್ರಾಮಸಭೆಯನ್ನು ಯಲಹಂಕ ಶಾಸಕ ಎಸ್.ಅರ್.ವಿಶ್ವನಾಥ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ‘ಯಲಹಂಕ ಮಿನಿ ವಿಧಾನಸೌಧಕ್ಕೆ ಬರುವ ಸಾರ್ವಜನಿಕರು ಗಂಟೆಗಟ್ಟಲೇ ತಮ್ಮ ದಾಖಲೆಗಳನ್ನು ಪಡೆಯಲು ನಿಂತಿರುತ್ತಾರೆ. ಬರುವವರಿಗೆ ಕುಳಿತುಕೊಂಡು ದಾಖಲೆಗಳನ್ನು ಪಡೆಯಲು ಆಸನಗಳ ವ್ಯವಸ್ಥೆಯನ್ನು ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಲ್ಲದೇ ಎಲ್ಲರಿಗೂ ಉಚಿತ ಕಾಫಿ, ಟೀ ಒದಗಿಸುವಂತೆ ಹೇಳಿದ್ದು, ಯಂತ್ರವನ್ನು ಒಂದು ವಾರದೊಳಗೆ ಅಳವಡಿಸಲಾಗುವುದು’ ಎಂದರು.

‘ದಶಕಗಳಿಂದ ಮಾವಳ್ಳಿಪುರ ಗ್ರಾಮದಲ್ಲಿ ಕಸದ ರಾಶಿ ಬಿದ್ದಿದೆ. ಕಸದಿಂದ ಜಿನುಗುತ್ತಿರುವ ವಿಷಕಾರಿ ದ್ರವ ಭೂ ಒಡಲನ್ನು ಸೇರುತ್ತಿದೆ. ಶೀಘ್ರದಲ್ಲಿಯೇ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುವುದು’ ಎಂದು ತಿಳಿಸಿದರು.

‘ಮಾಚೋಹಳ್ಳಿ, ಕಾಚೋಹಳ್ಳಿ ಕೆರೆಗಳನ್ನು ₹2 ಕೋಟಿ ವೆಚ್ಚದಲ್ಲಿ ಕಲಷಿತಗೊಂಡಿರುವ ಕೆರೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಎರಡೂ ಗ್ರಾಮ ಪಂಚಾಯಿತಿಗೆ ₹30 ಕೋಟಿ ಅನುದಾನದಲ್ಲಿ ರಸ್ತೆ ಮತ್ತು ಕುಡಿಯುವ ನೀರಿನ ಕಾಮಗಾರಿಗಳನ್ನು ಮಾಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT