ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾಕ್ಸ್‌ ಲೈಫ್‌ ಓಟಕ್ಕೆ ನೋಂದಣಿ ಆರಂಭ

Last Updated 31 ಜನವರಿ 2019, 20:00 IST
ಅಕ್ಷರ ಗಾತ್ರ

ಮ್ಯಾಕ್ಸ್ ಲೈಫ್ ಇನ್‍ಶೂರೆನ್ಸ್ ‘ದಿ ರನ್- ಬೆಂಗಳೂರು’ ಮ್ಯಾರಥಾನ್‌ ಓಟವನ್ನು ಮಾರ್ಚ್ 3 ರಂದು ಆಯೋಜಿಸಿದ್ದು, ಸಾರ್ವಜನಿಕರಿಂದ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಇದು 4ನೇ ಸರಣಿಯಾಗಿದ್ದು, ನಗರದ ನಾಗರಿಕರು, ಸ್ನೇಹಿತರು, ಕುಟುಂಬ ಸದಸ್ಯರು ಒಂದೆಡೆ ಸೇರಿ ಎಲ್ಲರ ಆರೋಗ್ಯ, ಕ್ಷೇಮಕ್ಕಾಗಿ ಓಡುವುದಾಗಿದೆ.

ಈ ಬಾರಿಯ ರನ್ ಅನ್ನು ಕುಟುಂಬಗಳಿಗಾಗಿ 5 ಕಿ.ಮೀ (8 ವರ್ಷ ಮೇಲ್ಪಟ್ಟವರು) ಮತ್ತು 10 ಕಿ.ಮೀ ದೂರದ ಓಟವನ್ನು ಎಲ್ಲರಿಗೂ ಮುಕ್ತಗೊಳಿಸಲಾಗಿದೆ. ಈ ಓಟದಲ್ಲಿ ವಿಜೇತರಾಗುವವರಿಗೆ ₹ 2 ಲಕ್ಷ ಬಹುಮಾನವೂ ಇದೆ.

ಈ ಓಟವು ಹಲವು ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಪ್ರಮುಖವಾಗಿ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಮ್ಯೂಸಿಕ್, ಫುಡ್, ಡಾನ್ಸ್, ಏರೋಬಿಕ್ಸ್, ಜುಂಬಾ ಮತ್ತು ಪಿಲೇಟ್ಸ್‍ನಂತಹ ಸ್ಪರ್ಧೆಗಳು ಇರಲಿವೆ.

ನೋಂದಣಿಯಿಂದ ಸಂಗ್ರಹವಾಗುವ ಹಣವನ್ನು ‘ಜ್ವಾಲ’ ಎಂಬ ಸ್ವಯಂ ಸೇವಾ ಸಂಘಕ್ಕೆ ನೀಡಲಾಗುತ್ತದೆ. ಈ ಸಂಸ್ಥೆಯು ಭಾರತದಲ್ಲಿ ಮಹಿಳೆಯರ ಸ್ಥಾನಮಾನವನ್ನು ವೃದ್ಧಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ.

ಮಾಹಿತಿಗೆ https://www.therun.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT