ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕ್ರರೇಖೆಗಳಿಗೆ ನಗು ತುಂಬಿದ ಗಣ್ಯರು

ವ್ಯಂಗ್ಯಚಿತ್ರ ಪ್ರದರ್ಶನ
Last Updated 3 ಏಪ್ರಿಲ್ 2019, 13:54 IST
ಅಕ್ಷರ ಗಾತ್ರ

ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ ಏಪ್ರಿಲ್‌ 7ರಿಂದ ಲೇಖಕ, ವ್ಯಂಗ್ಯಚಿತ್ರಕಾರ ಬಿಬೆಕ್‌ ಸೇನ್‌ಗುಪ್ತಾ ಅವರ ‘ಆ್ಯಸ್‌ ಇಟ್‌ ಈಸ್‌’ ವ್ಯಂಗ್ಯಚಿತ್ರಗಳ ಪ್ರದರ್ಶನ ಆಯೋಜಿಸಿದೆ.

ನಿವೃತ್ತ ಐಎಎಸ್‌ ಅಧಿಕಾರಿ ಚಿರಂಜೀವ್‌ ಸಿಂಗ್‌ ಬೆಳಿಗ್ಗೆ11ಕ್ಕೆ ವ್ಯಂಗ್ಯಚಿತ್ರ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಏಪ್ರಿಲ್‌ 20ರವರೆಗೆ ಪ್ರದರ್ಶನ ಸಾರ್ವಜನಿಕರಿಗೆ ತೆರೆದಿರುತ್ತದೆ.

ಕೋಲ್ಕತ್ತಾದಲ್ಲಿ ಹುಟ್ಟಿ, ಬೆಳೆದ ವಿವೇಕ್‌ ಸೇನ್‌ಗುಪ್ತಾ ಸದ್ಯ ಉದ್ಯೋಗ ನಿಮಿತ್ತಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಜರ್ಮನ್‌ ಬಹುರಾಷ್ಟ್ರೀಯ ಕಂಪನಿ ಉದ್ಯೋಗಿಯಾಗಿರುವ ವಿವೇಕ್‌ ಅವರಿಗೆ ವ್ಯಂಗ್ಯಚಿತ್ರ ರಚನೆ ಮೆಚ್ಚಿನ ಹವ್ಯಾಸ. ಹಲವು ವ್ಯಂಗ್ಯಚಿತ್ರಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಅನೇಕ ದೇಶಗಳನ್ನು ಸುತ್ತಿರುವ ವಿವೇಕ್‌ ಅವರು ವ್ಯಂಗ್ಯಚಿತ್ರಗಳಿಗೆ ಸಂಬಂಧಿಸಿದಂತೆ ಈಗಾಗಲೇಮೂರು ಕೃತಿಗಳನ್ನು ಹೊರತಂದಿದ್ದಾರೆ. ಆ ಪುಸ್ತಕಗಳಿಗೆ ಅವರೇ ವ್ಯಂಗ್ಯಚಿತ್ರ ರಚಿಸಿದ್ದಾರೆ.

ಫುಟ್‌ಬಾಲ್‌ ಮತ್ತು ಒಲಿಂಪಿಕ್ಸ್‌ ಹಾಸ್ಯ ಸನ್ನಿವೇಶಗಳು ಅವರ ಮೊನಚಾದ ರೇಖೆಗಳಲ್ಲಿ ಮರುಹುಟ್ಟು ಪಡೆದಿವೆ.ಕ್ರೀಡಾಪಟುಗಳು, ಸಂಗೀತಗಾರರು, ವ್ಯಂಗ್ಯಚಿತ್ರಕಾರರು ಮತ್ತು ರಾಜಕಾರಣಿಗಳು ಅವರ ವಕ್ರರೇಖೆಗಳಿಗೆ ಆಹಾರವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT