ಭಾನುವಾರ, ಅಕ್ಟೋಬರ್ 2, 2022
28 °C

ಮೇಘಾ ಮುಡಿಗೇರಿದ ‘ಮಿಸೆಸ್ ಇಂಡಿಯಾ ಕರ್ನಾಟಕ’ ಕಿರೀಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಯಲಹಂಕದಲ್ಲಿ ನಡೆದ ‘ಮಿಸೆಸ್ ಇಂಡಿಯಾ ಕರ್ನಾಟಕ–2021’ ಸೌಂದರ್ಯ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಮೇಘಾ ರವೀಂದ್ರಸ್ವಾಮಿ ವಿಜೇತರಾದರು.

ಸ್ಪರ್ಧೆಯ ನಂತರದ ಸ್ಥಾನಗಳಿಗೆ ಕ್ರಮವಾಗಿ ಶ್ರದ್ಧಾ ದಾಮೋದರ್, ನವ್ಯಾಗೌಡ ಮತ್ತು ಶೀತಲ್ ನೆಟಲ್ ಕರ್, ಶಿಲ್ಪಾ ಶ್ರೀಧರ್ ಮತ್ತು ಅರ್ಚನಾ ಜಯರಾಮ್, ಡಾ ಶ್ವೇತಾ ಜಕ್ಕಾ ಮತ್ತು ನೀತು ಆರ್ ಪ್ರಸನ್ನ ಆಯ್ಕೆಯಾದರು. ಅಂತಿಮ ಸ್ಪರ್ಧೆಯಲ್ಲಿ ಒಟ್ಟು 25 ಗೃಹಿಣಿಯರು ಭಾಗವಹಿಸಿದ್ದರು.

‘ಸೂಪರ್ ಕ್ಲಾಸಿಕ್ ವಿನ್ನರ್’ ವಿಭಾಗದಲ್ಲಿ ರಜಿನಿ ಲಕ್ಕಾ ಹಾಗೂ ‘ಕ್ಲಾಸಿಕ್ ವಿನ್ನರ್’ ವಿಭಾಗದಲ್ಲಿ ಶ್ರುತಿ ಶಿವಲಿಂಗಯ್ಯ ವಿಜೇತರಾದರು.

‘ಕೇವಲ ಸೌಂದರ್ಯಕ್ಕೆ ಈ ಸ್ಪರ್ಧೆ ಸೀಮಿತವಲ್ಲ. ಹೆಣ್ಣಿನೊಳಗೆ ಅಡಗಿರುವ ಅನೇಕ ಕಲೆಗಳನ್ನು ಅರಿಯಲು ಅತ್ಯುತ್ತಮ ಅವಕಾಶವಾಗಿ ಈ ಸ್ಪರ್ಧೆ ರೂಪುಗೊಂಡಿದೆ. ಇವರು ಸ್ತ್ರೀ ಸಮುದಾಯಕ್ಕೆ ಆದರ್ಶ’ ಎಂದು ಮಿಸೆಸ್ ಇಂಡಿಯಾ ಕರ್ನಾಟಕ ಸ್ಪರ್ಧೆಯ ಆಯೋಜಕಿ ಪ್ರತಿಭಾ ಸಂಶಿಮಠ ತಿಳಿಸಿದರು.

‘ಮಿಸೆಸ್ ಇಂಡಿಯಾ ಕರ್ನಾಟಕದಲ್ಲಿ ವಿಜೇತರಾದವರು ರಾಷ್ಟ್ರಮಟ್ಟದಲ್ಲಿ ದೀಪಾಲಿ ಫಡ್ನಿಸ್ ಆಯೋಜಿಸುವ ಮಿಸೆಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ’ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.