ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಸಂಗೀತ ಶಿಬಿರ, ಕೌಶಲ ತರಬೇತಿಗೆ ಆಹ್ವಾನ

ಉದಯಭಾನು ಕಲಾಸಂಘದಿಂದ ವೈವಿಧ್ಯಮಯ ಕಾರ್ಯಕ್ರಮ
Published 22 ಮೇ 2024, 15:40 IST
Last Updated 22 ಮೇ 2024, 15:40 IST
ಅಕ್ಷರ ಗಾತ್ರ

ಬೆಂಗಳೂರು: ಉದಯಭಾನು ಕಲಾಸಂಘವು ತನ್ನ ವಜ್ರ ಮಹೋತ್ಸವದ ಆಚರಣೆಯ ಸಂದರ್ಭದಲ್ಲಿ ಕಂಪ್ಯೂಟರ್ ಬೇಸಿಕ್‌ ತರಗತಿ, ಸಂಗೀತ ಕಲಿಕಾ ತರಬೇತಿ ಶಿಬಿರ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಸಂಗೀತದಲ್ಲಿ ಆಸಕ್ತಿ ಇರುವ ಏಳು ವರ್ಷ ಮೇಲ್ಪಟ್ಟವರಿಗಾಗಿ ಜೂನ್‌ 1 ರಿಂದ 8ರವರೆಗೆ ‘ಮುಂಗಾರು ಸಂಗೀತ ರಸಗ್ರಹಣ ಶಿಬಿರ’ವನ್ನು ಆಯೋಜಿಸುತ್ತಿದೆ. ಶಿಬಿರಕ್ಕೆ ಪ್ರವೇಶ ಉಚಿತವಾಗಿದೆ.

ಸ್ವಯಂ ಉದ್ಯೋಗ ಕೌಶಲ ಅಭಿವೃದ್ಧಿ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಬೇಸಿಕ್ ತರಗತಿಗಳು ಮತ್ತು ವಾಣಿಜ್ಯ ತರಗತಿಯ ವಿದ್ಯಾರ್ಥಿಗಳಿಗೆ ಟ್ಯಾಲಿ, ಟಿಡಿಎಸ್, ಜಿಎಸ್‌ಟಿ ಅಕೌಂಟಿಂಗ್ ತರಬೇತಿಗಳು ಜೂನ್ 1ರಿಂದ ಪ್ರಾರಂಭವಾಗಲಿವೆ. ತಜ್ಞ ಕಲಾವಿದರಿಂದ ಭರತನಾಟ್ಯ, ಚಿತ್ರಕಲೆ, ಸುಗಮ ಸಂಗೀತ, ಕೀಬೋರ್ಡ್, ತಬಲಾ, ಕೊಳಲು, ಕರ್ನಾಟಕ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ತರಗತಿಗಳನ್ನು ನಡೆಸಲಾಗುತ್ತಿದೆ.

ಪೂರಕ ಶಿಕ್ಷಣದ ಅಗತ್ಯವಿರುವ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಉಪನ್ಯಾಸ ತರಗತಿಗಳನ್ನು ಜುಲೈ ಮೊದಲ ವಾರದಲ್ಲಿ ಆರಂಭಿಸಲಾಗುವುದು. ಆಸಕ್ತರು ಉದಯಭಾನು ಕಲಾ ಸಂಘದ ಕಚೇರಿಯಿಂದ ಅರ್ಜಿಗಳನ್ನು ಪಡೆದು, ಶಿಬಿರ ಮತ್ತು ತರಗತಿಗಳಿಗೆ ನೋಂದಾಯಿಸಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿವರಕ್ಕೆ: 080-26601831/26609343 (ಬೆಳಿಗ್ಗೆ 10-1 ಮತ್ತು ಸಂಜೆ 5-8ರ ಒಳಗೆ) ಅಥವಾ ವಾಟ್ಸ್‌ಆ್ಯಪ್ ಸಂಖ್ಯೆ 9844192952

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT