ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಮೆನ್ಶಿಯಾ: ಆರೈಕೆ, ಸಂಶೋಧನೆಗೆ ಒಪ್ಪಂದ

Published 23 ಜನವರಿ 2024, 16:08 IST
Last Updated 23 ಜನವರಿ 2024, 16:08 IST
ಅಕ್ಷರ ಗಾತ್ರ

ಬೆಂಗಳೂರು: ಮರೆವು ಕಾಯಿಲೆಯ (ಡಿಮೆನ್ಶಿಯಾ) ಆರೈಕೆ, ಸಂಶೋಧನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌) ಮತ್ತು ಡಿಮೆನ್ಶಿಯಾ ಇಂಡಿಯಾ ಅಲೈನ್ಸ್ (ಡಿಐಎ) ಒಪ್ಪಂದ ಮಾಡಿಕೊಂಡಿವೆ. 

ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಮತ್ತು ಡಿಐಎ ಅಧ್ಯಕ್ಷೆ ರಾಧಾ ಎಸ್. ಮೂರ್ತಿ ಅವರು ನಗರದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದರು. 

‘ಜನಸಂಖ್ಯೆ ಹೆಚ್ಚಾದಂತೆ ಈ ಕಾಯಿಲೆಗೆ ಒಳಗಾಗುವರ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ರೋಗ ಪತ್ತೆಗೆ ಹಾಗೂ ಆರೈಕೆಗೆ ಆದ್ಯತೆ ನೀಡಲಾಗಿದೆ. ಈಗಾಗಲೇ ರಾಜ್ಯದಲ್ಲಿ ಡಿಮೆನ್ಶಿಯಾ ಕಾಯಿಲೆಯನ್ನು ಸಾರ್ವಜನಿಕ ಆರೋಗ್ಯದ ಆದ್ಯತೆ ಎಂದು ಘೋಷಿಸಲಾಗಿದೆ. ಸಮಸ್ಯೆ ಎದುರಿಸುತ್ತಿರುವವರು ಹಾಗೂ ಅವರ ಕುಟುಂಬದ ಸದಸ್ಯರ ಜೀವನಮಟ್ಟ ಸುಧಾರಿಸುವ ಗುರಿಯನ್ನು ಈ ಒಪ್ಪಂದದಡಿ ಹೊಂದಲಾಗಿದೆ’ ಎಂದು ಡಾ. ಪ್ರತಿಮಾ ಮೂರ್ತಿ ತಿಳಿಸಿದ್ದಾರೆ.

‘ಈ ಕಾಯಿಲೆಯು ಒಬ್ಬ ವ್ಯಕ್ತಿಗೆ ಸಿಮೀತವಾಗಿರದೆ ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಈ ಕಾಯಿಲೆಗೆ ಒಳಗಾದವರನ್ನು ಯಾವ ರೀತಿ ನಿಭಾಯಿಸಬೇಕೆಂದು ತಿಳಿಯದಿರುವುದೇ ಇದಕ್ಕೆ ಮುಖ್ಯ ಕಾರಣ. ಆದ್ದರಿಂದ ಈ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಡಿಮೆನ್ಶಿಯಾ ತಡೆಗಟ್ಟುವಿಕೆ, ಗುರುತಿಸುವಿಕೆ ಹಾಗೂ ನಿರ್ವಹಣೆ ಬಗ್ಗೆ ಸಂಶೋಧನೆಗಳನ್ನು ನಡೆಸಲಾಗುವುದು’ ಎಂದು ರಾಧಾ ಎಸ್. ಮೂರ್ತಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT