ದೇಶದ ಒಟ್ಟು 12 ಕಂಪನಿಗಳು ನಕಲಿ ಪ್ರಮಾಣಪತ್ರ ಪಡೆದು ಇಂತಹ ಕಾನೂನುಬಾಹಿರಚಟುವಟಿಕೆಯಲ್ಲಿ ತೊಡಗಿವೆ. ಬೆಂಗಳೂರಿನ ಬಯೋಗ್ರೀನ್, ಎನ್ವಿಗ್ರೀನ್ ಎಂಬ ಕಂಪನಿಗಳೂ ಈ ಪಟ್ಟಿಯಲ್ಲಿವೆ. ಇವು ನಮ್ಮಿಂದ ಯಾವುದೇ ಪ್ರಮಾಣಪತ್ರವನ್ನು ಪಡೆದುಕೊಂಡಿಲ್ಲ. ಹಾಗಾಗಿ, ಕೂಡಲೇ ಇವುಗಳ ವಿರುದ್ಧ ಕ್ರಮಕೈಗೊಂಡು, ವರದಿಯನ್ನು ಜ.20ರೊಳಗಾಗಿ ಮಂಡಳಿಗೆ ಸಲ್ಲಿಸಬೇಕು ಎಂದು ಸಿಪಿಸಿಬಿ ಸೂಚನೆ ನೀಡಿದೆ.