ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಯುವತಿಯ ನಗ್ನ ಫೋಟೊ ಕಳುಹಿಸಿ ಹಣಕ್ಕೆ ಬೇಡಿಕೆ, ರೌಡಿ ಸೇರಿ ಮೂವರ ಬಂಧನ

Published 18 ಫೆಬ್ರುವರಿ 2024, 14:26 IST
Last Updated 18 ಫೆಬ್ರುವರಿ 2024, 14:26 IST
ಅಕ್ಷರ ಗಾತ್ರ

ಬೆಂಗಳೂರು: ಯುವತಿಯೊಬ್ಬರ ನಗ್ನ ಫೋಟೊಗಳನ್ನು ಅವರ ತಾಯಿಗೆ ಕಳುಹಿಸಿ ಹಣಕ್ಕಾಗಿ ಬೆದರಿಸಿದ್ದ ಆರೋಪದಡಿ ರೌಡಿ ಸೇರಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಯುವತಿಯ ತಾಯಿ ನೀಡಿದ್ದ ದೂರು ಆಧರಿಸಿ ಯಲಹಂಕ ನ್ಯೂ ಟೌನ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಈ ಪ್ರಕರಣದ ತನಿಖೆ ಕೈಗೊಂಡು ರೌಡಿ ಮನೋಜ್ ಅಲಿಯಾಸ್ ಕೆಂಚ, ಈತನ ಸಹಚರರಾದ ಸುಭಾಷ್ ಹಾಗೂ ಯೋಗೇಶ್‌ನನ್ನು ಸೆರೆ ಹಿಡಿಯಲಾಗಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ರೌಡಿ ಮನೋಜ್, ಅಪರಾಧ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ. ಯುವತಿ ಹಾಗೂ ಅವರ ತಾಯಿಗೆ ಪರಿಚಯಸ್ಥನಾಗಿದ್ದ ಈತ, ಹಣಕ್ಕಾಗಿ ಆಗಾಗ ಬೆದರಿಕೆಯೊಡ್ಡುತ್ತಿದ್ದ. ಈ ಹಿಂದೆಯೂ ತಾಯಿಯನ್ನು ಬೆದರಿಸಿ ₹40 ಸಾವಿರ ಪಡೆದುಕೊಂಡಿದ್ದ.’

‘ಇತ್ತೀಚೆಗೆ ಯುವತಿಯ ನಗ್ನ ಫೋಟೊವನ್ನು ತಾಯಿಗೆ ಕಳುಹಿಸಿದ್ದ ಕೆಂಚ, ಜೈಲಿನಿಂದ ಕರೆ ಮಾಡಿ ₹5 ಲಕ್ಷ ಹಣ ನೀಡುವಂತೆ ಬೇಡಿಕೆ ಇರಿಸಿದ್ದ. ಹಣ ನೀಡದಿದ್ದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊ ಅಪ್‌ಲೋಡ್ ಮಾಡುವುದಾಗಿ ಹಾಗೂ ಅಳಿಯನಿಗೆ ಕಳುಹಿಸುವುದಾಗಿ ಬೆದರಿಸಿದ್ದ. ಆರೋಪಿ ಕಿರುಕುಳದಿಂದ ಬೇಸತ್ತ ತಾಯಿ ಠಾಣೆಗೆ ದೂರು ನೀಡಿದ್ದರು’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ಜೈಲಿನಿಂದಲೇ ರೌಡಿ ಕೆಂಚ ಕರೆ ಮಾಡಿದ್ದ. ಜೊತೆಗೆ, ಸಹಚರರ ಮೂಲಕವೂ ಯುವತಿಯ ತಾಯಿಗೆ ಕರೆ ಮಾಡಿಸಿ ಬೆದರಿಕೆ ಹಾಕಿಸಿದ್ದ. ಹೀಗಾಗಿ, ಎಲ್ಲರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT