ಕುರುಬ ಸಮುದಾಯದ 1400 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

7

ಕುರುಬ ಸಮುದಾಯದ 1400 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Published:
Updated:
Deccan Herald

ಬೆಂಗಳೂರು: ಕರ್ನಾಟಕ ಪ್ರದೇಶ ಕುರುಬರ ಸಂಘ ಭಾನುವಾರ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ 90 ಮತ್ತು ಅದಕ್ಕಿಂತ ಹೆಚ್ಚು ಅಂಕಗಳಿಸಿದ ಜನಾಂಗದ 1400 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿತು. 

ಭಾನುವಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ‘ರಾಜ್ಯದ ಎಲ್ಲ ವರ್ಗದ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ಶೀಘ್ರವಾಗಿ ವಿತರಿಸುವಂತೆ ಸಮನ್ವಯ ಸಮಿತಿಯಲ್ಲಿ    ಮಾತನಾಡುತ್ತೇನೆ’ ಎಂದು ಭರವಸೆ ನೀಡಿದರು.

‘ಪ್ರತಿಭೆ ಜಾತಿಯಿಂದ ಬರುವಂಥದ್ದಲ್ಲ. ಯಾವುದೇ ಜಾತಿಗೂ ಅದು ಸೀಮಿತವಾಗಿದರೆ ಎಲ್ಲ ಜಾತಿ, ಧರ್ಮಗಳ ಸ್ವತ್ತಾಗಿದೆ’ ಎಂದರು. 

‘ಶಿಕ್ಷಣವಿಲ್ಲದಿದ್ದರೆ ಸ್ವಾಭಿಮಾನ ಕಳೆದುಕೊಂಡು ಗುಲಾಮಗಿರಿಗೆ ಒಳಗಾಗಬೇಕಾಗುತ್ತದೆ. ಶಿಕ್ಷಣಕ್ಕಾಗಿ ಸರ್ಕಾರ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ಕುರುಬ ಜನಾಂಗದ ವಿದ್ಯಾರ್ಥಿಗಳು ಸುಶಿಕ್ಷಿತರಾಗಿ ಐಎಎಸ್‌, ಕೆಎಎಸ್‌ ಅಧಿಕಾರಿಗಳಾಗಬೇಕು. ಸಮಾಜವನ್ನು ಮುನ್ನಡೆಸುವಲ್ಲಿ ಅಣಿಯಾಗಬೇಕು’ ಎಂದು ಕಿವಿಮಾತು ಹೇಳಿದರು. 

‘ವಿಧಾನ ಪರಿಷತ್‌ ಸದಸ್ಯ ರಘುನಾಥರಾವ್‌ ಮಲಕಾಪುರೆ, ‘ಕಲಬುರ್ಗಿ, ಬೀದರ್‌ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗೊಂಡ ಮತ್ತು ಕುರುಬ ಸಮಾನ ಪದಗಳಾಗಿವೆ. ಹಾಗಾಗಿ ಮೂರು ಜಿಲ್ಲೆಗಲ್ಲಿನ ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು ಎಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು’.

‘ಸದ್ಯ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ನಮ್ಮ ಬೇಡಿಕೆ ಇಟ್ಟರೆ ಕೂಡಲೇ ಕಾರ್ಯಗತವಾಗಬಹುದು’ ಎಂದು ಒತ್ತಾಯಿಸಿದರು. 

ಸಂವಿಧಾನ ಗೊತ್ತಿಲ್ಲದೆ ಮಾತನಾಡಬೇಡಿ: ‘ಕಲಬುರ್ಗಿ, ಬೀದರ್‌ ಮತ್ತು ಯಾದಗಿರಿ ಜಿಲ್ಲೆಗಳ ಕುರುಬರನ್ನು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರ್ಪಡೆ ಪ್ರಾಯೋಗಿಕವಾಗಿ ಅಸಾಧ್ಯವಾದದ್ದು. ಯಾವ ಸರ್ಕಾರಕ್ಕೂ ಇದು ಸಾಧ್ಯವಿಲ್ಲ’.

‘ಹಾಗಂತ ನಾನು ಎಸ್‌ಟಿ ಜನಾಂಗದ ವಿರೋಧಿಯೂ ಅಲ್ಲ. ಎಲ್ಲ ಜನಾಂಗಗಳ ಸಾಮಾಜಿಕ ನ್ಯಾಯದ ಪರವಾಗಿದ್ದೇನೆ’ ಎಂದು ಸಿದ್ದರಾಮಯ್ಯ ಗುಡುಗುಗಿದರು. 

‘ಸಂವಿಧಾನ ಗೊತ್ತಿಲ್ಲದೆ ಮಾತನಾಡಬೇಡಿ. ಈ ಬಗ್ಗೆ ಸುಮ್ಮನೆ ಜನರಿಗೆ ಭ್ರಮೆ ಹುಟ್ಟಿಸಿ, ತಪ್ಪುದಾರಿಗೆ ಎಳೆಯಬೇಡಿ’ ಎಂದು ಖಾರವಾಗಿ ಮಾತನಾಡಿದರು.

‘ಕ್ಷುಲ್ಲಕ ಕಾರಣಕ್ಕಾಗಿ ಹಿಂದೂಳಿದ ವರ್ಗಗಳಲ್ಲಿನ ಒಗ್ಗಟ್ಟು ಒಡೆಯಬಾರದು. ಒಂದು ವೇಳೆ ಒಗ್ಗಟ್ಟು ಮುರಿದು ಬಿದ್ದರೆ ಬೇರೆಯವರು ಅದರ ಪ್ರಯೋಜನ ಪಡೆಯಲು ಹಾತೋರೆಯ್ಯುತ್ತಿರುತ್ತಾರೆ’ ಎಂದು ಎಚ್ಚರಿಸಿದರು. 

ಸಚಿವ ಬಂಡೆಪ್ಪ ಕಾಶೆಂಪೂರ, ಆರ್‌.ಶಂಕರ್‌, ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ ಮಾತನಾಡಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !