ದಂಪತಿಗಳಿಗೆ ಉಚಿತ ಸಾಮೂಹಿಕ‌ ಷಷ್ಠಿಪೂರ್ತಿ ಸಮಾರಂಭ

7

ದಂಪತಿಗಳಿಗೆ ಉಚಿತ ಸಾಮೂಹಿಕ‌ ಷಷ್ಠಿಪೂರ್ತಿ ಸಮಾರಂಭ

Published:
Updated:

ಬೆಂಗಳೂರು: ವಿಶ್ವದಲ್ಲೇ ಪ್ರಥಮ ಬಾರಿಗೆ 60 ವರ್ಷ ತುಂಬಿದ ದಂಪತಿಗಳಿಗೆ ಉಚಿತ ಸಾಮೂಹಿಕ ಷಷ್ಠಿ ಪೂರ್ತಿ ಸಮಾರಂಭವನ್ನು ಸಾಯಿಬಾಬಾ ಇಂಟರ್ ನ್ಯಾಷನಲ್ ಫೌಂಡೇಷನ್ ಭಾನುವಾರ ಆಯೋಜಿಸಿದೆ.

ಪ್ರಾರ್ಥನೆ, ಲೋಕಕಲ್ಯಾಣಕ್ಕಾಗಿ, ಪ್ರಕೃತಿ ವಿಕೋಪಗಳಿಂದ ಶಾಂತಿ, ಮತ್ತು ಸರ್ವ ಜನಾಂಗದ ಶ್ರೇಯೋಭಿವೃದ್ಧಿಗಾಗಿ, ಆಯುರಾರೋಗ್ಯ, ಐಶ್ವರ್ಯ ಅಭಿವೃದ್ಧಿಗಾಗಿ ವಿಶೇಷ ಹೋಮ, ಹವನಗಳು ನಡೆಯುತ್ತಿವೆ.

‘ಕ್ಷುಲ್ಲಕ ಕಾರಣಗಳಿಗೆ ಇಂದಿನ ದಂಪತಿಗಳು ತಮ್ಮ ದಾಂಪತ್ಯ ಜೀವನವನ್ನೆ ಕಳೆದುಕೊಂಡಿರುತ್ತಾರೆ. ಕಳೆದುಕೊಳ್ಳುವವರೂ ಇದ್ದಾರೆ. ಆದರೆ, ಏಳು ಬೀಳಿನ ನಡುವೆಯೂ ಸಮಾಜ, ಕುಟುಂಬಕ್ಕೆ ಮಾದರಿಯಾಗುವಂತೆ 60, 70 ವರ್ಷ ಸಹಬಾಳ್ವೆ ನಡೆಸುಕೊಂಡು ಬಂದಿರುವ ಸಾವಿರಾರು ದಂಪತಿಗಳನ್ನು ನೋಡಿ, ಸ್ಫೂರ್ತಿ ಪಡೆದರೆ ನಮ್ಮ ಪ್ರಯತ್ನ ಸಾರ್ಥಕ’ ಎಂಬುದು ಸಂಸ್ಥೆಯ ಅಧ್ಯಕ್ಷ ಬಾಬಾ ಆದೇಶ ಗುರೂಜಿ ಅವರ ಅಭಿಪ್ರಾಯ.

ಆನ್‌ಲೈನ್ ಬುಕ್ಕಿಂಗ್, ಮತ್ತು ನೇರ ಬುಕ್ಕಿಂಗ್ ಮೂಲಕ ಈಗಾಗಲೆ 150ಕ್ಕೂ ಹೆಚ್ಚು ದಂಪತಿಗಳು ಷಷ್ಠಿಪೂರ್ತಿಗಾಗಿ ಹೆಸರು ನೊಂದಾಯಿಸಿಕೊಂಡಿದ್ದಾರೆ.

ಮಲ್ಲೇಶ್ವರದ‌ ಸುದರ್ಶನ‌ ಸಿಲ್ಕ್ಸ್‌ನವರು ಸೀರೆ, ಪಂಚೆ, ಶಲ್ಯೆ ಉಡುಗೊರೆಯಾಗಿ ನೀಡಿದ್ದಾರೆ.

ಷಷ್ಠಿಪೂರ್ತಿ ಆಚರಿಸಲು ಬರುವ ದಂಪತಿಗಳಿಗೆ ಯಾವುದೇ ರೀತಿಯ ಶುಲ್ಕವಿಲ್ಲ. ಮೃಷ್ಟಾನ್ನ ಭೋಜನಕ್ಕೆ ಪಾಸ್ ವ್ಯವಸ್ಥೆ ಮಾಡಲಾಗಿದೆ.

ಭೋಜನದಲ್ಲಿ ಕಾಕಿನಾಡ ಕಾಜ, ದಾವಣಗೆರೆ ಬೆಣ್ಣೆ ದೋಸೆ, ಬಾಂಬೆ ಚಾಟ್ಸ್ ಇತ್ಯಾದಿ ವಿವಿಧ ಬಗೆಯ 69 ಆಹಾರ ಪದಾರ್ಥಗಳ ಸಿದ್ಧತೆ ನಡೆದಿದೆ.

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !