ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಜಿಯದಲ್ಲಿ ಗುಣಮಟ್ಟದ ವೈದ್ಯಕೀಯ ಶಿಕ್ಷಣ: ಕೆಟವನ್‌ ಕಾರ್ಬಿಯಾ

ಕಡಿಮೆ ವೆಚ್ಚ, ಉತ್ತಮ ಹವಾಗುಣ, ಪ್ರವೇಶವೂ ಸರಳ
Last Updated 21 ಆಗಸ್ಟ್ 2022, 20:12 IST
ಅಕ್ಷರ ಗಾತ್ರ

ಬೆಂಗಳೂರು: ‘ಜಾರ್ಜಿಯ ದೇಶದಲ್ಲಿ ಗುಣಮಟ್ಟದ ವೈದ್ಯಕೀಯ ಶಿಕ್ಷಣದ ಜತೆಗೆ ವಿದೇಶದ ಪ್ರತಿ ವಿದ್ಯಾರ್ಥಿಗೂ ಸುರಕ್ಷತೆ ನೀಡಲಾಗುತ್ತಿದೆ’ ಎಂದು ಕೌಕಾಸಸ್‌ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಸಂಬಂಧ ಮತ್ತು ಯೋಜನಾ ವಿಭಾಗದ ಉಪನಿರ್ದೇಶಕಿ ಕೆಟವನ್‌ ಕಾರ್ಬಿಯಾ ಹೇಳಿದರು.

ನಗರದ ಹೋಟೆಲ್‌ ಸಿಟಿ ಸೆಂಟರ್‌ ಸಭಾಂಗಣದಲ್ಲಿ ‘ಸೀಕೊ ಇಂಟರ್‌ನ್ಯಾಷನಲ್‌’ ಸಂಸ್ಥೆಯು ಡಿಎಚ್‌ ಹಾಗೂ ಪಿವಿ ಬ್ರ್ಯಾಂಡ್ ಸ್ಪಾಟ್‌ ಸಹಯೋಗದಲ್ಲಿ ಆಯೋಜಿಸಿದ್ದ ‘ವಿದೇಶದಲ್ಲಿ ಎಂಬಿಬಿಎಸ್‌ ಅಧ್ಯಯನಕ್ಕೆ ಅವಕಾಶಗಳು’ ಕುರಿತು ಸಂವಾದದಲ್ಲಿ ಅವರು ಮಾತನಾಡಿದರು.

‘ವಿ.ವಿಗೆ ಪ್ರವೇಶವು ಸರಳವಾಗಿ ಇರಲಿದೆ. ಎಂಬಿಬಿಎಸ್ ಶಿಕ್ಷಣ ಮುಕ್ತಾಯವಾದ ಬಳಿಕ ತಮ್ಮ ದೇಶಗಳಲ್ಲಿ ವೈದ್ಯ ವೃತ್ತಿ ಆರಂಭಿಸಬಹುದು. ವಿಶ್ವವಿದ್ಯಾಲಯಕ್ಕೆ ಅಂತರರಾಷ್ಟ್ರೀಯ ಮಾನ್ಯತೆಯಿದೆ. ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಶಿಕ್ಷಣ ಸೇರಿದಂತೆ ವಿವಿಧ ಪದವಿಗಳನ್ನು ಪೂರೈಸಬಹುದು’ ಎಂದರು.

‘ಸಿಬ್ಬಂದಿಗೆ 23 ವರ್ಷಗಳ ಶೈಕ್ಷಣಿಕ ಸೇವಾ ಅನುಭವವಿದೆ. 600 ಮಂದಿ ನುರಿತ ಉಪನ್ಯಾಸಕರಿದ್ದು ಸುಸಜ್ಜಿತ ಪ್ರಯೋಗಾಲಯ ವ್ಯವಸ್ಥೆಯಿದೆ. ನಮ್ಮ ವಿವಿಯಲ್ಲಿ 7 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಎಂಬಿಬಿಎಸ್‌ ಸೇರಿದಂತೆ ಯಾವ ಪದವಿ ಪಡೆದರೂ ಉದ್ಯೋಗ ಖಚಿತ. ಶೇ 99ರಷ್ಟು ಮಂದಿಗೆ ಕೆಲಸ ಸಿಕ್ಕಿದೆ. ವಿವಿಧ ರಾಷ್ಟ್ರಗಳ ವಿದ್ಯಾರ್ಥಿಗಳೊಂದಿಗೆ ಬೆರೆಯುವ ಅವಕಾಶ ಲಭಿಸುತ್ತದೆ’ ಎಂದು ಹೇಳಿದರು.

ಜಾರ್ಜಿಯ ವಿವಿಯ ಪದವಿ ವಿಭಾಗದ ಆಡಳಿತಾತ್ಮಕ ನಿರ್ದೇಶಕಿ ನೀನೊ ಚಲಾಬಾಷ್‌ವಿಲಿ ಪ್ರತಿಕ್ರಿಯಿಸಿ, ಗುಣಮಟ್ಟದ ಜತೆಗೆ ಪ್ರಾಯೋಗಿಕ ಶಿಕ್ಷಣಕ್ಕೆ ಒತ್ತು ನೀಡಲಾಗುವುದು ಎಂದರು.

ಬೆಂಗಳೂರಿನ ಪೀಣ್ಯದ ಸೀಕೊ ಇಂಟರ್‌ನ್ಯಾಷನಲ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಮೀರಾ, ‘17 ವರ್ಷಗಳಿಂದ ಎಂಬಿಬಿಎಸ್‌ ಸೇರ ಬಯಸುವ ವಿದ್ಯಾರ್ಥಿಗಳಿಗೆ ಸಂಸ್ಥೆಯು ನೆರವು ನೀಡುತ್ತಿದೆ. ರಷ್ಯಾ, ಉಕ್ರೇನ್‌, ಜಾರ್ಜಿಯಾ, ಪೊಲ್ಯಾಂಡ್‌ ದೇಶಗಳಲ್ಲಿ ಶಿಕ್ಷಣ ಪಡೆಯಲು ತೆರಳುವವರಿಗೆ ಎಲ್ಲ ರೀತಿಯ ಸಹಾಯ ನೀಡಲಾಗಿದೆ. ಭಾರತದಲ್ಲಿ ನೀಟ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೂ, ಲಭ್ಯವಿರುವ ಸೀಟ್‌ಗಳಿಗೂ ವ್ಯತ್ಯಾಸವಿದೆ. ರಾಜ್ಯದಲ್ಲಿ ಕೇವಲ 10 ಸಾವಿರ ಸೀಟ್‌ಗಳು ಲಭ್ಯವಿದೆ. ದಿನದಿಂದ ದಿನಕ್ಕೆ ಸ್ಪರ್ಧೆ ಹೆಚ್ಚಾಗುತ್ತಿದ್ದು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆಯೂ ಹೆಚ್ಚಳವಾಗಿದೆ’ ಎಂದರು.

ಸೀಕೊದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಜಾಝಿರ್‌ ಅಬ್ದುಲ್‌ ಖಾದರ್ ಮಾತನಾಡಿ, ಬಲ್ಗೇರಿಯ, ಜಾರ್ಜಿಯ, ಪೊಲ್ಯಾಂಡ್‌ ದೇಶಕ್ಕೆ ಸಾಕಷ್ಟು ವಿದ್ಯಾರ್ಥಿಗಳನ್ನು ಕಳುಹಿಸಲಾಗಿದೆ. ಜಾರ್ಜಿಯದಲ್ಲೇ 17 ಸಾವಿರ ಭಾರತೀಯ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 24 ಪ್ರತಿಷ್ಠಿತ ವಿವಿಗಳಿವೆ. ಆರಂಭಿಕ ದಿನಗಳಲ್ಲಿ ಅಲ್ಲಿನ ಆಹಾರ ರುಚಿಸುವುದಿಲ್ಲ. ಸಂಸ್ಕೃತಿ ವಿಭಿನ್ನವಾಗಿದೆ. ಕ್ರಮೇಣ ಎಲ್ಲವೂ ಹೊಂದಾಣಿಕೆ ಆಗಲಿದೆ ಎಂದು ಹೇಳಿದರು.

ಈ ವರ್ಷ 18 ಲಕ್ಷ ಮಂದಿ ನೀಟ್‌ ಪರೀಕ್ಷೆ ತೆಗೆದುಕೊಂಡಿದ್ದಾರೆ. ದೇಶದಲ್ಲಿಯೇ ಎಲ್ಲರಿಗೂ ಎಂಬಿಬಿಎಸ್‌ಗೆ ಪ್ರವೇಶ ದೊರೆಯುವುದಿಲ್ಲ ಎಂದರು. ಸಂಸ್ಥೆಯ ಮುಖ್ಯಸ್ಥ ಅಬ್ದುಲ್‌ ಖಾದರ್‌ ಹಾಜರಿದ್ದರು.

ಜಾರ್ಜಿಯದಲ್ಲಿ ಉತ್ತಮ ಹವಾಗುಣ ಇದೆ. ನೆರೆ ರಾಷ್ಟ್ರಗಳಿಂದಲೂ ಭೀತಿ ಇಲ್ಲ. ಸುರಕ್ಷತೆ ಇದೆ. ಅಲ್ಲಿ ವೈದ್ಯಕೀಯ ಶಿಕ್ಷಣವೂ ದುಬಾರಿ ಆಗಿಲ್ಲ. 6 ವರ್ಷದ ಎಂಬಿಬಿಎಸ್‌ ಶಿಕ್ಷಣವನ್ನು ₹ 35 ಲಕ್ಷದ ಒಳಗೆ ಪೂರ್ಣಗೊಳಿಸಬಹುದು.

ಎಸ್‌.ವಿ.ಶ್ರೀಕುಮಾರ್‌, ಆರ್‌ಟಿ ನಗರ‌

ಭಾರತ ಹಾಗೂ ಜಾರ್ಜಿಯದಲ್ಲಿನ ವೈದ್ಯಕೀಯ ಶಿಕ್ಷಣದ ಪಠ್ಯಕ್ರಮಕ್ಕೆ ಅಷ್ಟೊಂದು ವ್ಯತ್ಯಾಸ ಇಲ್ಲ. ಅಲ್ಲಿ ಶಿಕ್ಷಣ ಪಡೆದು ಭಾರತದಲ್ಲಿ ಸುಲಭವಾಗಿ ವೃತ್ತಿ ಆರಂಭಿಸಬಹುದು.

-ಪ್ರೀತು, ವಿದ್ಯಾರ್ಥಿನಿ, ಮೈಸೂರು

ಭಾರತದಲ್ಲಿ ಎಂಬಿಬಿಎಸ್‌ ಶಿಕ್ಷಣ ಪೂರ್ಣಗೊಳಿಸಲು ₹ 2 ಕೋಟಿ ಬೇಕು. ಇಲ್ಲಿ ಶಿಕ್ಷಣ ದುಬಾರಿ ಆಗಿದೆ. ಜಾರ್ಜಿಯಾದಲ್ಲಿ ಕಡಿಮೆ ಹಣಕ್ಕೆ ಉತ್ತಮ ಶಿಕ್ಷಣ ಲಭಿಸುತ್ತದೆ.

- ಮಹಮ್ಮದ್‌ ಇಕ್ಬಾಲ್‌, ವಿದ್ಯಾರ್ಥಿ ಮೊಹಿದ್ದೀನ್‌ ಇಲಾಹನ್‌ ಅವರ ತಂದೆ, ದಕ್ಷಿಣ ಕನ್ನಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT