ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರಿ ಮಳೆ, ಬಿರುಗಾಳಿ: ನೆಲಕಚ್ಚಿದ ಮಾವಿನ ಬೆಳೆ

Published 22 ಮೇ 2023, 23:18 IST
Last Updated 22 ಮೇ 2023, 23:18 IST
ಅಕ್ಷರ ಗಾತ್ರ

ಯಲಹಂಕ: ಭಾನುವಾರ ಸುರಿದ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಗೆ ರಾಜಾನುಕುಂಟೆಯ ಅದ್ದೆ ವಿಶ್ವನಾಥಪುರ ಗ್ರಾಮದಲ್ಲಿ ಕೊಯ್ಲಿಗೆ ಬಂದಿದ್ದ ಮಾವಿನ ಕಾಯಿಗಳು ನೆಲಕಚ್ಚಿವೆ.

ಹೆಸರಘಟ್ಟ ಹೋಬಳಿಯ ಅದ್ದೆ ವಿಶ್ವನಾಥಪುರ ಗ್ರಾಮದ ರೈತರಾದ ಸಂಪಂಗಿರಾಮಯ್ಯ ಮತ್ತು ರಾಮಯ್ಯ ಅವರ 9 ಎಕರೆ ತೋಟದಲ್ಲಿ ಬೆಳೆದಿದ್ದ ಮಾವಿನ ಬೆಳೆಗೆ ಹಾನಿಯಾಗಿ ಕಾಯಿಗಳು ಉದುರಿದ್ದು, ಅಪಾರ ನಷ್ಟವಾಗಿದೆ. ಅರಕೆರೆ ಗ್ರಾಮದ ಮಂಜುನಾಥ್ ಎಂಬುವರು ಮೂರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ಬೆಳೆಗೂ ಸಹ ಹಾನಿಯಾಗಿದೆ.

ಸೊಣ್ಣೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಸಂದ್ರ ಗ್ರಾಮದಲ್ಲಿ ಗೋಪಾಲ್ ಎಂಬುವರಿಗೆ ಸೇರಿದ ಪಾಲಿಹೌಸ್ ಬಿರುಗಾಳಿಗೆ ಹಾರಿಹೋಗಿದೆ. ಹನಿಯೂರಿನ ಕೆಲ ಮನೆಗಳ ಶೀಟ್‌ಗಳು ಹಾರಿಹೋಗಿವೆ.

ಸೋಮವಾರ ತಾಲ್ಲೂಕು ಸಹಾಯಕ ತೋಟಗಾರಿಕಾ ಅಧಿಕಾರಿ ಶಿವಣ್ಣ, ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಮಳೆಯಿಂದ ಹಾನಿಯಾಗಿರುವ ಬಗ್ಗೆ ಸರ್ಕಾರಕ್ಕೆ ವರದಿ ನೀಡಿ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.

‘ಕಳೆದ ಮೂರ್ನಾಲ್ಕು ವರ್ಷಗಳಿಂದ ಫಸಲ್ ಭಿಮಾ ಯೋಜನೆಯಡಿ, ಬೆಳೆವಿಮೆ ಪಾವತಿ ಮಾಡುತ್ತಿದೆ. ಆದರೆ, 2-3 ವರ್ಷಗಳಿಂದ ಬೆಳೆ ಹಾನಿಯಾದರೂ ಪರಿಹಾರ ಬಂದಿರಲಿಲ್ಲ. ಆದ್ದರಿಂದ, ಈ ಬಾರಿ ವಿಮೆ ಹಣ ಪಾವತಿಸಿರಲಿಲ್ಲ’ ಎಂದು ರೈತ ಸಂಪಂಗಿರಾಮಯ್ಯ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT