ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಕೆಲವೆಡೆ ಮುಂದುವರಿದ ಮಳೆ

Published 21 ಮೇ 2024, 0:09 IST
Last Updated 21 ಮೇ 2024, 0:09 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ದಕ್ಷಿಣ ಹಾಗೂ ಪಶ್ಚಿಮ ಭಾಗದ ಹಲವು ಪ್ರದೇಶಗಳಲ್ಲಿ ಸೋಮವಾರ ಉತ್ತಮ ಮಳೆಯಾಯಿತು. ಹಲವು ಸ್ಥಳಗಳಲ್ಲಿ ತಡರಾತ್ರಿಯವರೆಗೂ ತುಂತುರು ಮಳೆ ಮುಂದುವರಿದಿತ್ತು.

ಸೋಮವಾರ ಬೆಳಿಗ್ಗೆಯಿಂದ ನಗರದಾದ್ಯಂತ ಮೋಡದ ವಾತಾವರಣವಿತ್ತು. ಮಧ್ಯಾಹ್ನ ಹಾಗೂ ಸಂಜೆ ವೇಳೆಯಲ್ಲಿ ಕೆಲವೆಡೆ ಉತ್ತಮ ಮಳೆಯಾಯಿತು. 

ಎಚ್‌. ಗೊಲ್ಲಹಳ್ಳಿ, ರಾಜರಾಜೇಶ್ವರಿನಗರ, ಹೆಮ್ಮಿಗೆಪುರದಲ್ಲಿ ತಲಾ 2 ಸೆಂ.ಮೀ, ಗೊಟ್ಟಿಗೆರೆಯಲ್ಲಿ 1.2 ಸೆಂ.ಮೀ, ಉತ್ತರಹಳ್ಳಿ, ಕೆಂಗೇರಿ, ಅಂಜನಾಪುರ, ಅರಕೆರೆ, ದೊರೆಸಾನಿಪಾಳ್ಯದಲ್ಲಿ ತಲಾ ಒಂದು ಸೆಂ.ಮೀ ಮಳೆಯಾಗಿದೆ.

ನಂದಿನಿ ಲೇಔಟ್‌, ಪೀಣ್ಯ ಕೈಗಾರಿಕೆ ಪ್ರದೇಶ, ಹೇರೋಹಳ್ಳಿ, ವಿಜಯನಗರ, ನಾಗ‍ಪುರ, ವನ್ನಾರಪೇಟೆ, ಎಚ್‌ಎಎಲ್‌ ವಿಮಾನ ನಿಲ್ದಾಣ, ಹರಳೂರು, ಬಿಟಿಎಂ ಲೇಔಟ್‌, ಬಿಳೇಕಹಳ್ಳಿ, ಗೊಟ್ಟಿಗೆರೆ, ಪಟ್ಟಾಭಿರಾಮನಗರ, ವಿದ್ಯಾಪೀಠ ಸುತ್ತಮುತ್ತ ಹಗುರ ಮಳೆಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT