ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೀಣ್ಯ ದಾಸರಹಳ್ಳಿ: ವಸತಿ ಸಮುಚ್ಚಯದಲ್ಲಿ ದಿನವಿಡೀ ರಾಮೋತ್ಸವ

Published 22 ಜನವರಿ 2024, 16:07 IST
Last Updated 22 ಜನವರಿ 2024, 16:07 IST
ಅಕ್ಷರ ಗಾತ್ರ

ಪೀಣ್ಯ ದಾಸರಹಳ್ಳಿ: ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಜಿ.ಎಂ. ಇನ್ಫೈನೆಟ್ ಡ್ಯಾಫೋಡಿಲ್ಸ್ ಅಪಾರ್ಟ್ಮೆಂಟ್‌ನಲ್ಲಿ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ ಸೋಮವಾರ ದಿನವಿಡೀ ರಾಮೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.

ಶಾಸಕ ಎಸ್. ಮುನಿರಾಜು ರಾಮೋತ್ಸವ ಉದ್ಘಾಟಿಸಿದರು. ಅಪಾರ್ಟ್ಮೆಂಟ್‌ನ ಎಲ್ಲ ನಿವಾಸಿಗಳು ಕೇಸರಿ ಸೀರೆ ಶಾಲು ಧರಿಸಿಕೊಂಡು ಹಬ್ಬದ ವಾತಾವರಣವನ್ನು ನಿರ್ಮಿಸಿದ್ದರು.

'ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಯ ನೇರ ಪ್ರಸಾರ, 'ರಾಮಾಯಣ' ಚಲನಚಿತ್ರ ಪ್ರದರ್ಶನ, ದೀಪಾರಾಧನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ದಿನವಿಡೀ ನಡೆಯಲಿವೆ' ಎಂದು ಅಪಾರ್ಟ್ಮೆಂಟ್ ನಿವಾಸಿಗಳ ಸಂಘದ ಅಧ್ಯಕ್ಷ ಚಿರಾಗ್ ತಿಳಿಸಿದರು.

ಸಮಾರಂಭದಲ್ಲಿ ವಿಜ್ಞಾನ ಲೇಖಕ ಗುರುರಾಜ ದಾವಣಗೆರೆ, ಕ್ಷೇಮಾಭಿವೃದ್ಧಿ ಸಂಘದ ಅಲಂಕಾರ್ ಗುರುರಾಜ್, ಮಲ್ಲಯ್ಯ, ನಾಗೇಂದ್ರ, ಸಂದೀಪ್ ಸಿಂಗ್ ಅನೂಪ್ ಚೌಧರಿ, ಅಮಿತ್ ಅಗರ್ವಾಲ್ ಮುಂತಾದವರು ಹಾಜರಿದ್ದರು.

ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಜಿ.ಎಂ. ಇನ್ಫೈನೆಟ್ ಡ್ಯಾಫೋಡಲ್ಸ್ ಅಪಾರ್ಟ್ಮೆಂಟ್ ನಲ್ಲಿ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯ ಪ್ರಯುಕ್ತ ರಾಮೋತ್ಸವ ಸಮಾರಂಭದಲ್ಲಿ ಶಾಸಕ ಎಸ್. ಮುನಿರಾಜು ಮತ್ತು ಅಪಾರ್ಟ್ಮೆಂಟ್ ನಾಗರಿಕರು ಭಾಗವಹಿಸಿದ್ದರು.
ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಜಿ.ಎಂ. ಇನ್ಫೈನೆಟ್ ಡ್ಯಾಫೋಡಲ್ಸ್ ಅಪಾರ್ಟ್ಮೆಂಟ್ ನಲ್ಲಿ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯ ಪ್ರಯುಕ್ತ ರಾಮೋತ್ಸವ ಸಮಾರಂಭದಲ್ಲಿ ಶಾಸಕ ಎಸ್. ಮುನಿರಾಜು ಮತ್ತು ಅಪಾರ್ಟ್ಮೆಂಟ್ ನಾಗರಿಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT