ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಯಾಶೀಲರನ್ನು ಸೃಷ್ಟಿಸುವ ರಂಗಭೂಮಿ: ಸಾಹಿತಿ ಎಂ.ಎಸ್. ನರಸಿಂಹಮೂರ್ತಿ

Published 14 ಮೇ 2024, 16:32 IST
Last Updated 14 ಮೇ 2024, 16:32 IST
ಅಕ್ಷರ ಗಾತ್ರ

ಬೆಂಗಳೂರು: ‘ರಂಗಭೂಮಿಯ ಮೂಲಕ ಕಲಾಕ್ಷೇತ್ರಕ್ಕೆ ಪಾದಾರ್ಪಣೆ ಮಾಡುವ ಕಲಾವಿದರು ಕ್ರಿಯಾಶೀಲ ಹಾಗೂ ಉತ್ತಮ ಅಭಿನಯ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ’ ಎಂದು ಹಾಸ್ಯ ಸಾಹಿತಿ ಎಂ.ಎಸ್. ನರಸಿಂಹಮೂರ್ತಿ ಹೇಳಿದರು.

ರಂಗಸಂಸ್ಕೃತಿ ತಂಡದ ‘8ನೇ ವಾರ್ಷಿಕೋತ್ಸವ’ ಮತ್ತು ‘ರಂಗಸಂಸ್ಕೃತಿ ಸಿರಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕಿರುತೆರೆ, ಬೆಳ್ಳಿತೆರೆಯಲ್ಲಿ ಅಭಿನಯಿಸುವ ಬಹುತೇಕ ಕಲಾವಿದರು ರಂಗಭೂಮಿ ಹಿನ್ನೆಲೆಯವರು. ರಂಗಭೂಮಿ ಹಿನ್ನೆಲೆಯಿಂದ ಬಂದ ಕಲಾವಿದರ ಕಲಾನೈಪುಣ್ಯತೆ ಇತರರಲ್ಲಿ ಕಂಡು ಬರುವುದಿಲ್ಲ‘ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ 2024ನೇ ಸಾಲಿನ ‘ರಂಗಸಂಸ್ಕೃತಿ ಸಿರಿ‘ ಪ್ರಶಸ್ತಿಯನ್ನು ನಟಿ ಕಲ್ಯಾಣಿ ಪ್ರದೀಪ್ ಅವರಿಗೆ ಪ್ರದಾನ ಮಾಡಲಾಯಿತು.

ಸೌಭಾಗ್ಯ ಹಂದ್ರಾಳ ಅವರು ಭರತನಾಟ್ಯ ಪ್ರದರ್ಶಿಸಿದರು. ರಂಗಸಂಸ್ಕೃತಿಯ ಕಲಾವಿದರು ‘ಭಾಗವತರ ನಾಟಕ ಮಂಡಳಿ’ ಎಂಬ ಹಾಸ್ಯ ನಾಟಕವನ್ನು ಪ್ರಸ್ತುತಪಡಿಸಿದರು. 

ನಾಟಕಕಾರರಾದ ಲೋಕನಾಥ ದೀಕ್ಷಿತ್, ಪತ್ರಕರ್ತ ಪ್ರಶಾಂತ ರಿಪ್ಪನ್‌ಪೇಟೆ, ನ್ಯಾಯವಾದಿ ರಘು, ಜಯಂತಿ, ಸುಗುಣ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT