ಕೆ.ಆರ್.ಪುರ: ಇ–ಖಾತೆಯಾಗದ ಬಿಬಿಎಂಪಿ ವ್ಯಾಪ್ತಿಯಲ್ಲಿನ ಖಾಲಿ ನಿವೇಶನ, ಬಡಾವಣೆ, ಬಹುಮಹಡಿ ಕಟ್ಟಡ, ವಿಲ್ಲಾಗಳಂತಹ ಆಸ್ತಿಗಳನ್ನು ಹಿಂದಿನ ಆದೇಶದಂತೆ ನೋಂದಣಿ ಮಾಡಿಕೊಳ್ಳಲು ಆರು ತಿಂಗಳು ಸಮಯಾವಕಾಶ ನೀಡುವಂತೆ ಬೆಂಗಳೂರು ಬಿಲ್ಡರ್ಸ್ ಮತ್ತು ಡೇವಲಪರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಮನವಿ ಸಲ್ಲಿಸಿದರು.

ಸರ್ಕಾರದ ಆದೇಶದಂತೆ ಬಡಾವಣೆ ನಿರ್ಮಾಣಕ್ಕೆ ಹಾಗೂ ಬಹು ಮಹಡಿಗಳ ಕಟ್ಟಡ ನಿರ್ಮಾಣಕ್ಕೆ ಇ-ಖಾತೆಗಳನ್ನು ಕಡ್ಡಾಯವಾಗಿಸಲಾಗಿದೆ. ಆ ಪ್ರಕಾರ ಸರ್ಕಾರವು 2024ರ ಅಕ್ಟೋಬರ್ 31 ಕ್ಕೆ ಇ-ಖಾತೆ ರಹಿತ ಆಸ್ತಿಗಳಿಗೆ ಗಡುವು ನೀಡಿತ್ತು. ನೋಂದಣಿಗೆ ಸಮಯಾವಕಾಶ ಬಹಳ ಕಡಿಮೆ ಇದ್ದ ಕಾರಣ, ಬಡಾವಣೆಗಳಲ್ಲಿನ ನಿವೇಶನಗಳು, ಅಪಾರ್ಟ್ಮೆಂಟ್ಗಳು ಗಡುವಿನ ಒಳಗೆ ನೋಂದಣಿಯಾಗದೆ ಹಾಗೇಯೇ ಉಳಿದಿವೆ ಎಂದು ಬೆಂಗಳೂರು ಬಿಲ್ಡರ್ಸ್ ಮತ್ತು ಡೇವಲಪರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ.ವೆಂಕಟಪ್ಪ ವಿವರಿಸಿದರು.

ಇದರಿಂದ ಸಣ್ಣ ಬಿಲ್ಡರ್ಸ್ ಮತ್ತು ಡೆವಲಪರ್ಸ್ಗಳಿಗೆ, ಸಾರ್ವಜನಿಕರಿಗೆ, ಮಾಲೀಕರಿಗೆ ಬಹಳ ತೊಂದರೆಯಾಗಿದೆ.ಕೆಲವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದರು.

ಸಂದರ್ಭದಲ್ಲಿ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿಗಳಾದ ಪ್ರಸಾದ್, ಉಪಾಧ್ಯಕ್ಷರಾದ ರವೀಂದ್ರ, ಖಜಾಂಜಿ ಎ ಅಶೋಕ್, ತಿರುಮಲ ನಾಯ್ಡು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.