ಶುಕ್ರವಾರ, ನವೆಂಬರ್ 15, 2019
23 °C

ಶಾಲೆ ಸಿ.ಸಿ.ಟಿ.ವಿ ಕ್ಯಾಮೆರಾವನ್ನೇ ಕದ್ದೊಯ್ದರು

Published:
Updated:

ಬೆಂಗಳೂರು: ಲಿಂಗರಾಜಪುರ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ ಕೊಠಡಿಯ ಕಿಟಕಿ ಹಾಗೂ ವಿದ್ಯುತ್ ಸ್ವಿಚ್ ಬೋರ್ಡ್‌ಗಳನ್ನು ಒಡೆದು ಹಾಕಿರುವ ದುಷ್ಕರ್ಮಿಗಳು, ಶಾಲೆಯಲ್ಲಿ ಅಳವಡಿಸಿದ್ದ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನೂ ಕದ್ದೊಯ್ದಿದ್ದಾರೆ.

ಈ ಸಂಬಂಧ ಶಾಲೆ ಮುಖ್ಯ ಶಿಕ್ಷಕಿ ವಿ.ವರಲಕ್ಷ್ಮಿ ದೂರು ನೀಡಿದ್ದಾರೆ.

‘ಅಕ್ಟೋಬರ್ 29ರಂದು ಶಾಲೆ ಕೊಠಡಿಗಳಿಗೆ ಬೀಗ ಹಾಕಿ ಹೋಗಿದ್ದೆ. ಮರುದಿನ ಬೆಳಿಗ್ಗೆ ಎಂದಿನಂತೆ ಶಾಲೆಗೆ ಬಂದು ಕೊಠಡಿಯ ಬೀಗ ತೆರೆದು ನೋಡಿದಾಗಲೇ ವಿಷಯ ಗೊತ್ತಾಯಿತು’ ಎಂದು ವರಲಕ್ಷ್ಮಿ ದೂರಿನಲ್ಲಿ ತಿಳಿಸಿದ್ದಾರೆ.

‘ಅಪರಿಚಿತರು ರಾತ್ರಿ ವೇಳೆ ಶಾಲೆ ಆವರಣದೊಳಗೆ ನುಗ್ಗಿರಬಹುದು. ಕೊಠಡಿಯ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದು, ಸ್ಥಳದಲ್ಲಿ ಗಾಜಿನ ಚೂರುಗಳು ಬಿದ್ದಿವೆ. ಕೃತ್ಯ ಎಸಗಿರುವವರನ್ನು ಪತ್ತೆ ಮಾಡಿ’ ಎಂದು ಅವರು ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)