ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೌಟುಂಬಿಕ ಕಲಹ: ತಾಯಿ, ಮಗು ಆತ್ಮಹತ್ಯೆಗೆ ಯತ್ನ

Published 3 ಜನವರಿ 2024, 22:17 IST
Last Updated 3 ಜನವರಿ 2024, 22:17 IST
ಅಕ್ಷರ ಗಾತ್ರ

ಬೆಂಗಳೂರು: ಕೌಟುಂಬಿಕ ಕಲಹದಿಂದ ಬೇಸತ್ತು ತಾಯಿ ತನ್ನ ಮಗುವಿನೊಂದಿಗೆ ಅಡುಗೆ ಅನಿಲ ಸೋರಿಕೆ ಮಾಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ವೈಟ್‌ಫೀಲ್ಡ್‌ ಬಳಿಯ ನಾಗೊಂಡನಹಳ್ಳಿ ಬಳಿ ಬುಧವಾರ ನಡೆದಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿ ಅಗ್ನಿಶಾಮಕ ದಳ ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ಬಾಗಿಲು ಒಡೆದು ತಾಯಿ ಮತ್ತು ಮಗುವನ್ನು ರಕ್ಷಣೆ ಮಾಡಿದ್ದಾರೆ.

ನಾಗೊಂಡನಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರ ನಿವಾಸಿ ಪ್ರಭು ಅವರ ಪತ್ನಿ ತಮಿಳು ಸೆಲ್ವಿ (37) ಮತ್ತು 5 ವರ್ಷದ ಮಗುವನ್ನು ರಕ್ಷಿಸಲಾಗಿದೆ.

‘ತಮಿಳುನಾಡಿನ ಪ್ರಭು ಮತ್ತು ತಮಿಳು ಸೆಲ್ವಿ ದಂಪತಿ ಮಗನ ಜತೆಗೆ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದರು. ದಂಪತಿ ನಡುವೆ ಕೌಟುಂಬಿಕ ವಿಚಾರಕ್ಕೆ ಜಗಳ ನಡೆಯುತ್ತಿತ್ತು. ಬುಧವಾರ ಜಗಳ ನಡೆದು ಘಟನೆಯಿಂದ ಬೇಸರಗೊಂಡ ತಮಿಳು ಸೆಲ್ವಿ, ಪತಿ ಕೆಲಸಕ್ಕೆ ತೆರಳಿದಾಗ ಫ್ಲ್ಯಾಟ್ ಬಾಗಿಲು ಹಾಗೂ ಕಿಟಕಿ ಲಾಕ್ ಮಾಡಿಕೊಂಡು ಮನೆಯಲ್ಲಿದ್ದ ಅಡುಗೆ ಸಿಲಿಂಡರ್‌ನಿಂದ ಅನಿಲವನ್ನು ಸೋರಿಕೆ ಮಾಡಿಕೊಂಡಿದ್ದಾರೆ. ಅನುಮಾನಗೊಂಡು ಪತಿ ಮನೆಗೆ ವಾಪಸ್‌ ಬಂದು ಬಾಗಿಲು ತಟ್ಟಿದ್ದಾರೆ. ಬಾಗಿಲು ತೆರೆಯದೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸೆಲ್ವಿ ಹೇಳಿದ್ದಾರೆ. ಗಾಬರಿಗೊಂಡ ಪ್ರಭು, ಮನೆಯ ಕಿಟಕಿ ಬಳಿ ಬಂದು ನೋಡಿದಾಗ ಗ್ಯಾಸ್ ವಾಸನೆ ಬರುತ್ತಿತ್ತು. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದರು’ ಎಂದು ಮೂಲಗಳು ತಿಳಿಸಿದೆ.

ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಒಳ ಹೋಗುತ್ತಿದ್ದಂತೆ ತಮಿಳು ಸೆಲ್ವಿ ಬೆಂಕಿ ಪೊಟ್ಟಣ ತೋರಿಸಿ ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಉಪಾಯದಿಂದ ಮುಂದಕ್ಕೆ ಸಾಗಿದ ಸಿಬ್ಬಂದಿ ಇಬ್ಬರನ್ನೂ ರಕ್ಷಣೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT