ಶುಕ್ರವಾರ, ಅಕ್ಟೋಬರ್ 7, 2022
28 °C

ವೃಷಭಾವತಿ ಒತ್ತುವರಿ ತೆರವಿಗೆ ಗಡುವು ನೀಡಿದ ಹೈಕೋರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ವೃಷಭಾವತಿ ಮತ್ತು ಅದರ ಉಪನದಿ ವ್ಯಾಪ್ತಿಯಲ್ಲಿನ ಒತ್ತುವರಿಯನ್ನು ಸೆಪ್ಟೆಂಬರ್‌ 30ರೊಳಗೆ ತೆರವುಗೊಳಿಸಬೇಕು’ ಎಂದು ಹೈಕೋರ್ಟ್‌ ಬಿಬಿಎಂಪಿಗೆ ಗಡುವು ವಿಧಿಸಿದೆ.

ವಕೀಲೆ ಗೀತಾ ಮಿಶ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯ ಪೀಠ ಈ ಕುರಿತಂತೆ ಆದೇಶಿಸಿದೆ.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಕೀಲರು, ವೃಷಭಾವತಿ ನದಿ ಜಲಾಯನ, ಉಪ ನದಿಗಳು ಮತ್ತು ನದಿಗಳನ್ನು ಸಂಪರ್ಕಿಸುವ ಕೆರೆ ಪ್ರದೇಶದ ಸರ್ವೇ ಕುರಿತಾದ ಆರು ಸಂಪುಟಗಳ ಸಮಗ್ರ ವರದಿ ಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ಖಾಸಗಿ ವ್ಯಕ್ತಿಗಳು ಮತ್ತು ಸರ್ಕಾರಿ ಪ್ರಾಧಿಕಾರಗಳಿಂದ ಒತ್ತುವರಿಯಾಗಿರುವ ವಿವರಗಳನ್ನು ಒಳಗೊಂಡ ಈ ವರದಿಯಲ್ಲಿ, ವೃಷಭಾವತಿ ನದಿ ಜಲಾನಯನ, ಕಣಿವೆ, ಉಪ ನದಿಗಳು ಮತ್ತು ಅವುಗಳನ್ನು ಸಂಪರ್ಕಿಸುವ ಕೆರೆಯ ಪ್ರದೇಶ ಹಾಗೂ ಅವುಗಳ ಬಫರ್ ಝೋನ್‌ ಸರ್ವೇ ನಡೆಸಲಾಗಿದೆ.

ವರದಿಯನ್ನು ದಾಖಲಿಸಿ ಕೊಂಡ ನ್ಯಾಯಪೀಠ, ‘ಸೆಪ್ಟೆಂಬರ್ 30ರೊಳಗೆ ಒತ್ತುವರಿ ತೆರವುಗೊಳಿ ಸಬೇಕು. ಈ ಆದೇಶದ ಅನುಪಾ ಲನಾ ವರದಿಯನ್ನು ಅಕ್ಟೋಬರ್ 11ಕ್ಕೆ ಸಲ್ಲಿಸಬೇಕು‘ ಎಂದು ಬಿಬಿಎಂಪಿಗೆ ನಿರ್ದೇಶಿಸಿ ವಿಚಾರ ಣೆಯನ್ನು ಅ.19ಕ್ಕೆ ಮುಂದೂಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು