ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟಿಸಿಎಸ್‌ ವಿಶ್ವ 10ಕೆ ಬೆಂಗಳೂರು-2024’ ಓಟ: ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ

28ರಂದು ‘ಟಿಸಿಎಸ್‌ ವಿಶ್ವ 10ಕೆ ಬೆಂಗಳೂರು-2024’ ಓಟ
Published 23 ಏಪ್ರಿಲ್ 2024, 14:55 IST
Last Updated 23 ಏಪ್ರಿಲ್ 2024, 14:55 IST
ಅಕ್ಷರ ಗಾತ್ರ

ಬೆಂಗಳೂರು: ‘ಟಿಸಿಎಸ್‌ ವಿಶ್ವ 10ಕೆ ಬೆಂಗಳೂರು-2024’ ಓಟವನ್ನು ಇದೇ 28ರಂದು ಆಯೋಜಿಸಲಾಗಿದ್ದು, ಅಂದು ಹಲವು ರಸ್ತೆಗಳಲ್ಲಿ ವಾಹನ ಸಂಚಾರಗಳನ್ನು ನಿರ್ಬಂಧಿಸಲಾಗಿದೆ.

ಬೆಳಿಗ್ಗೆ 4ರಿಂದ 10 ಗಂಟೆಯವರೆಗೆ ಓಟ ನಡೆಯಲಿದೆ. ಈ ಅವಧಿಯಲ್ಲಿ ಕೆಲವೊಂದು ಸ್ಥಳಗಳಲ್ಲಿ ವಾಹನ ನಿಲುಗಡೆ ನಿರ್ಬಂಧಿಸಲಾಗಿದೆ. ಹಲವು ರಸ್ತೆಗಳ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಿದ್ದು, ಪರ್ಯಾಯ ಮಾರ್ಗದಲ್ಲಿ ಸವಾರರು, ಚಾಲಕರು ತೆರಳುವಂತೆ ಎಂದು ಸಂಚಾರ ಪೊಲೀಸರು ಮನವಿ ಮಾಡಿದ್ಧಾರೆ.

ವಾಹನ ಸಂಚಾರ ನಿರ್ಬಂಧಿಸಲಾದ ರಸ್ತೆಗಳು:

* ವಿಧಾನಸೌಧದ ಕಡೆಗೆ ಸಂಚರಿಸುವ ವಾಹನಗಳನ್ನು ಕೆ.ಆರ್‌. ಸರ್ಕಲ್‌ನಲ್ಲಿ ಮಾರ್ಗ ಬದಲಾಯಿಸಿ ಪೊಲೀಸ್ ಕಾರ್ನರ್‌ ಕಡೆಗೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ವಿಧಾನಸೌಧದ ಕಡೆಗೆ ಯಾವುದೇ ವಾಹನಗಳ ಪ್ರವೇಶಕ್ಕೆ ಅವಕಾಶವಿಲ್ಲ. (ಬೆಳಿಗ್ಗೆ 4ರಿಂದ 8ರವರೆಗೆ)

* ಬಾಳೇಕುಂದ್ರಿ ವೃತ್ತದಿಂದ ವಿಧಾನಸೌಧದ ಕಡೆಗೆ ಬರುವ ವಾಹನಗಳನ್ನು ಬಾಳೇಕುಂದ್ರಿ ಜಂಕ್ಷನ್‌ನಲ್ಲಿ ಮಾರ್ಗ ಬದಲಾಯಿಸಿ ಕನಿಂಗ್‌ಹ್ಯಾಮ್‌ ರಸ್ತೆ ಕಡೆಗೆ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. (ಬೆಳಿಗ್ಗೆ 4ರಿಂದ 8ರವರೆಗೆ)

* ಕಬ್ಬನ್‌ರಸ್ತೆಯಲ್ಲಿ ಮಣಿಪಾಲ್‌ ಸೆಂಟರ್‌ ಕಡೆಯಿಂದ ಸಿ.ಟಿ.ಒ ವೃತ್ತದವರೆಗೆ ಎರಡೂ ಕಡೆಯಲ್ಲೂ ವಾಹನ ಸಂಚಾರ ನಿರ್ಬಂಧಿಸಲಾಗಿದೆ. (ಬೆಳಿಗ್ಗೆ 4ರಿಂದ 10.30ರವರೆಗೆ)

* ಕಾಫಿಬೋರ್ಡ್‌ನಿಂದ ಬರುವ ಎಲ್ಲಾ ವಾಹನಗಳಿಗೆ ಸಿ.ಟಿ.ಒ. ಸರ್ಕಲ್‌ ಕಡೆಗೆ ಚಲಿಸಲು ಅವಕಾಶವಿರುವುದಿಲ್ಲ. ಟ್ರಾಫಿಕ್‌ ಹೆಡ್‌ಕ್ವಾರ್ಟರ್‌ ಜಂಕ್ಷನ್‌ನಿಂದ ನೇರವಾಗಿ ಸಂಚರಿಸಬೇಕು. (ಬೆಳಿಗ್ಗೆ 4ರಿಂದ 10ರವರೆಗೆ)

* ಇಂದಿರಾನಗರ, ಕೆ.ಆರ್‌.ಪುರಂ, ವೈಟ್‌ಫೀಲ್ಡ್‌ನಿಂದ ಬರುವ ವಾಹನಗಳ ಸಂಚಾರವನ್ನು ಆಂಜನೇಯ ಜಂಕ್ಷನ್‌ನಲ್ಲಿ ಹಲಸೂರು ಕೆರೆ ಕಡೆಗೆ ಬಲತಿರುವು ನಿಷೇಧಿಸಲಾಗಿದೆ.

* ಸಿಂಧಿ ಕಾಲೊನಿ ಜಂಕ್ಷನ್‌ ಮತ್ತು ಕೀರ್ತಿ ಸಾಗರ್‌ ಜಂಕ್ಷನ್‌ನಲ್ಲಿ ಅಸ್ಸಾಯೆ ರಸ್ತೆಗೆ ಹೋಗುವ ಎಲ್ಲ ರೀತಿಯ ವಾಹನ ಸಂಚಾರ ನಿರ್ಬಂಧಿಸಿ ವ್ಹೀಲರ್ಸ್‌ ರಸ್ತೆ, ಸೇಂಟ್‌ಜಾನ್ಸ್‌ ಚರ್ಚ್‌ ರಸ್ತೆ ಮುಖಾಂತರ ಸಂಚರಿಸಲು ಅವಕಾಶ.

* ಥಾಮ್ಸ್‌ ಬೇಕರಿ ಜಂಕ್ಷನ್‌ನಲ್ಲಿ ಅಸ್ಸಾಯೆ ರಸ್ತೆ ಮತ್ತು ನಾಗಾ ಜಂಕ್ಷನ್‌ ಕಡೆಗೆ ಹೋಗುವ ಎಲ್ಲಾ ರೀತಿಯ ವಾಹನಗಳನ್ನು ನಿರ್ಬಂಧಿಸಿ ವ್ಹೀಲರ್ಸ್‌ ರಸ್ತೆ, ಸೇಂಟ್‌ಜಾನ್ಸ್‌ ಚರ್ಚ್‌ ರಸ್ತೆ ಮುಖಾಂತರ ಸಂಚರಿಸಲು ಅವಕಾಶ

* ನಾಗಾ ಜಂಕ್ಷನ್‌ನಲ್ಲಿ ಸೇಂಟ್‌ ಜಾನ್ಸ್‌ ರಸ್ತೆಗೆ ಮತ್ತು ಹಲಸೂರು ಕೆರೆ ಕಡೆಗೆ ಹೋಗುವ ವಾಹನಗಳನ್ನು ನಿರ್ಬಂಧಿಸಿ ಸೇಂಟ್‌ ಜಾನ್ಸ್‌ ಚರ್ಚ್ ರಸ್ತೆ ಹಾಗೂ ಪ್ರೊಮ್ನೇಡ್‌ ರಸ್ತೆ ಮುಖಾಂತರ ವಾಹನಗಳ ಸಂಚಾರಕ್ಕೆ ಅವಕಾಶ

* ಲಾವಣ್ಯ ಜಂಕ್ಷನ್‌ನಲ್ಲಿ ಶ್ರೀ ಸರ್ಕಲ್‌ ಕಡೆಗೆ ಹೋಗುವ ಎಲ್ಲಾ ರೀತಿಯ ವಾಹನಗಳನ್ನು ನಿರ್ಬಂಧಿಸಿ ಎಸ್‌.ಸಿ ಗಾರ್ಡನ್‌ ಮುಖಾಂತರ ಸಂಚರಿಸಲು ಅವಕಾಶ.

ಭಾರೀ ವಾಹನಗಳ ಮಾರ್ಗ ಬದಲಾವಣೆ:

* ಓಲ್ಡ್‌ ಏರ್‌ಪೋರ್ಟ್‌ ರಸ್ತೆಯಿಂದ ಬರುವ ವಾಹನಗಳನ್ನು ಎ.ಎಸ್‌.ಸಿ ಸೆಂಟರ್‌ನಿಂದ ಇಂಡಿಯಾ ಗ್ಯಾರೇಜ್‌ ಮೂಲಕ ರಿಚ್‌ಮಂಡ್‌ ಸರ್ಕಲ್‌ ಕಡೆಗೆ ಮಾರ್ಗ ಬದಲಾವಣೆ.

* ಹಲಸೂರು ಮತ್ತು ಟ್ರಿನಿಟಿ ಕಡೆಯಿಂದ ಬರುವ ವಾಹನಗಳನ್ನು ಟ್ರಿನಿಟಿ ವೃತ್ತದಲ್ಲಿ ಹಾಸ್ಮಟ್‌ ಜಂಕ್ಷನ್‌ ಕಡೆಗೆ ಮಾರ್ಗ ಬದಲಾವಣೆ.

ವಾಹನ ನಿಲುಗಡೆ ನಿರ್ಬಂಧಿತ ಸ್ಥಳಗಳು: ಡಾ.ಬಿ.ಆರ್‌.ಅಂಬೇಡ್ಕರ್‌ ರಸ್ತೆ, ಕೆ.ಬಿ.ರಸ್ತೆ, ನೃಪತುಂಗ ರಸ್ತೆ, ಕ್ವೀನ್ಸ್‌ ರಸ್ತೆ, ರಾಜಭವನ ರಸ್ತೆ, ಮ್ಯೂಸಿಯಂ ರಸ್ತೆ, ಕಬ್ಬನ್‌ ರಸ್ತೆ, ಗೋಪಾಲಗೌಡ ವೃತ್ತ, ಡಿಸ್ಪೆನ್ಸರಿ ರಸ್ತೆ, ಡಿಕೆನ್ಸನ್‌ ರಸ್ತೆ, ಸೇಂಟ್‌ ಜಾನ್ಸ್‌ ರಸ್ತೆ, ಅಜಂತಾ ರಸ್ತೆ, ಅಣ್ಣಾಸ್ವಾಮಿ ಮೊದಲಿಯಾರ್‌ ರಸ್ತೆ, ಎಂ.ಜಿ. ರಸ್ತೆ, ಕಮಿಷರಿಯೇಟ್‌ ರಸ್ತೆ, ಮಗರತ್‌ ರಸ್ತೆ, ಬ್ರಿಗೇಡ್‌ ರಸ್ತೆ, ಎ.ಎಸ್‌.ಸಿ ಸೆಂಟರ್‌ನಿಂದ ರಿಚ್‌ಮಂಡ್‌ ಸರ್ಕಲ್‌ವರೆಗೆ, ವೆಬ್ಸ್‌ ಜಂಕ್ಷನ್‌ನಿಂದ ಅಡಿಗಾಸ್‌ವರೆಗೆ, ಭಾಸ್ಕರನ್‌ ರಸ್ತೆ, ಗಂಗಾಧರ್‌ ಚೆಟ್ಟಿ ರಸ್ತೆ, ವಾರ್‌ ಮೆಮೋರಿಯಲ್‌ ರಸ್ತೆ, ರೆಸಿಡೆನ್ಸಿ ರಸ್ತೆ, ಎ.ವಿ.ಎಂ. ರಸ್ತೆ, ಗುರುದ್ವಾರ ರಸ್ತೆ.

ವಾಹನ ನಿಲುಗಡೆಗೆ ಅವಕಾಶ (ಓಟದಲ್ಲಿ ಭಾಗವಹಿಸುವವರಿಗೆ): ಕಂಠೀರವ ಕ್ರೀಡಾಂಗಣ, ಯು.ಬಿ.ಸಿಟಿ, ಒನ್‌ ಎಂ.ಜಿ. ಮಾಲ್‌, ಗರುಡಾ ಮಾಲ್‌, ಆರ್ಮಿ ಪಬ್ಲಿಕ್‌ ಸ್ಕೂಲ್‌ (ಹಿರಿಯ ನಾಗರಿಕರು ಮತ್ತು ಬಸ್‌ಗಳಿಗಾಗಿ), ಮಣಿಪಾಲ್‌ ಸೆಂಟರ್‌ (ಮಾಧ್ಯಮದ ವಾಹನಗಳಿಗೆ)

ಮಾಣಿಕ್‌ಶಾ ಪೆರೇಡ್‌ ಮೈದಾನದಿಂದ ಸ್ಪರ್ಧೆ ಸಂಚಾರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ವಿಶ್ವ 10ಕೆ ಓಟದ ಸ್ಪರ್ಧೆಗಳಿಗೆ ನೂತನ ಮಾರ್ಗನಕ್ಷೆ ಹಾಗೂ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ‌ ಎಂದು ಪ್ರೊಕ್ಯಾಮ್ ಇಂಟರ್‌ನ್ಯಾಷನಲ್ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಸಿಂಗ್ ತಿಳಿಸಿದರು. ‘ಅಥ್ಲೀಟ್‌ಗಳ ಓಟ ಮತ್ತು ವಾಹನ ಸಂಚಾರಗಳೆರಡಕ್ಕೂ ಅಡಚಣೆಯಾಗದಂತೆ ಮಾರ್ಗವನ್ನು ಅಚ್ಚುಕಟ್ಟಾಗಿ ಗುರುತಿಸಲಾಗಿದೆ. 16ನೇ ಬಾರಿ ಈ ಓಟವು ನಡೆಯುತ್ತಿದೆ. ಈ ಹಿಂದಿನ ಓಟಗಳಲ್ಲಿ ಆಗಿರುವ ಅನುಭವದ ಆಧಾರದಲ್ಲಿ ವೇಳಾಪಟ್ಟಿ ಹಾಗೂ ಮಾರ್ಗ ರೂಪಿಸಲಾಗಿದೆ’ ಎಂದು ವಿವರಿಸಿದರು. ಕಬ್ಬನ್‌ ರಸ್ತೆಯ ಫೀಲ್ಡ್‌ ಮಾರ್ಷಲ್‌ ಸ್ಯಾಮ್‌ ಮಾಣಿಕ್‌ಶಾ ಪೆರೇಡ್‌ ಮೈದಾನದಿಂದ ಸ್ಪರ್ಧೆ ಆರಂಭಗೊಳ್ಳುವುದು. 1500 ಓಟಗಾರರು ಸೇರಿದಂತೆ 28 ಸಾವಿರಕ್ಕೂ ಅಧಿಕ ಮಂದಿ ಓಟದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು. ರೇಸ್ ವಿಭಾಗಗಳು: ಓಪನ್ 10ಕೆ: (ಆರಂಭ: ಬೆಳಿಗ್ಗೆ 5.10); ವಿಶ್ವ 10ಕೆ ಮಹಿಳೆಯರು (6.40); ವಿಶ್ವ 10ಕೆ ಪುರುಷರು (7.30); ಚಾಂಪಿಯನ್ಸ್‌ ಅಂಗವಿಕಲರು– 2.6 ಕಿ.ಮೀ. (8.50); ಮಜಾ ರನ್–5.5 ಕಿ.ಮೀ. (8.15); ಸಿಲ್ವರ್ಸ್‌ ರನ್‌–2.6 ಕಿ.ಮೀ. (8.50)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT