ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟೆಲಿಸ್ಕೋಪ್‌ ಲೈಬ್ರರಿ ಸೌಲಭ್ಯ

Published 12 ಮೇ 2024, 16:07 IST
Last Updated 12 ಮೇ 2024, 16:07 IST
ಅಕ್ಷರ ಗಾತ್ರ

ಬೆಂಗಳೂರು: ಜವಾಹರಲಾಲ್‌ ನೆಹರೂ ತಾರಾಲಯದಿಂದ ನಕ್ಷತ್ರ ವೀಕ್ಷಣೆ ಕಾರ್ಯಕ್ರಮ ಆಯೋಜಿಸಲಾಗಿದ್ದು ಇದಕ್ಕೆ ಟೆಲಿಸ್ಕೋಪ್‌ ಲೈಬ್ರರಿ ಸೌಲಭ್ಯ ಕಲ್ಪಿಸುತ್ತಿದೆ.

ಶಿಕ್ಷಣ ಸಂಸ್ಥೆಗಳು ಹಾಗೂ ಆಸಕ್ತರು ಟೆಲಿಸ್ಕೋಪ್‌, ಬೈನಾಕ್ಯುಲರ್‌ಗಳನ್ನು ತಾರಾಲಯದಿಂದ ಪಡೆದುಕೊಳ್ಳಬಹುದು. ಇವುಗಳನ್ನು ನಿಗದಿತ ಅವಧಿಯೊಳಗೆ ಸುರಕ್ಷಿತವಾಗಿ ವಾಪಸ್‌ ನೀಡಬೇಕು. ಆಸಕ್ತರಿಗೆ ಇದೇ 18 ಹಾಗೂ 19ರಂದು ತಾರಾಲಯದಲ್ಲಿ ಟೆಲಿಸ್ಕೋಪ್‌ ಬಳಸುವ ಕುರಿತು ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 11ರಿಂದ ಸಂಜೆ 5ರ ವರೆಗೆ ತರಬೇತಿ ನಡೆಯಲಿದೆ. ಇದಕ್ಕೆ ಶುಲ್ಕ ನಿಗದಿ ಪಡಿಸಲಾಗಿದೆ. ಮೋಡ ಕವಿದ ವಾತಾವರಣ ಇಲ್ಲದೇ ಇದ್ದರೆ 18ರಂದು ಸಂಜೆ 6.30ರ ನಂತರ ಆಕಾಶ ವೀಕ್ಷಣಾ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ: 080 22379725, 080 22266084 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT