ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಕಾನ್‌ಸ್ಟೆಬಲ್ ಮೇಲೆ ಹಲ್ಲೆ: ಬೈಕ್ ಸವಾರ ಬಂಧನ

Published 21 ಮಾರ್ಚ್ 2024, 17:22 IST
Last Updated 21 ಮಾರ್ಚ್ 2024, 17:22 IST
ಅಕ್ಷರ ಗಾತ್ರ

ಬೆಂಗಳೂರು: ಸದಾಶಿವನಗರ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್‌ಸ್ಟೆಬಲ್ ಪಿ.ವೈ. ಶಿವರಾಜು ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ಬೈಕ್ ಸವಾರ ಪ್ರತೀಕ್ ಆರ್. ಶಿಂಧೆ (25) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

‘ವೈಯಾಲಿಕಾವಲ್‌ನ ಪ್ರತೀಕ್, ತನ್ನ ಸ್ನೇಹಿತೆ ಜೊತೆ ಬೈಕ್‌ನಲ್ಲಿ ಹೊರಟಿದ್ದಾಗ ಈ ಘಟನೆ ನಡೆದಿದೆ. ಕಾನ್‌ಸ್ಟೆಬಲ್ ನೀಡಿದ್ದ ದೂರು ಆಧರಿಸಿ ಪ್ರತೀಕ್‌ನನ್ನು ಸೆರೆಹಿಡಿಯಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿ ಪ್ರತೀಕ್, ಮಾ. 19ರಂದು ರಾತ್ರಿ 9 ಗಂಟೆ ಸುಮಾರಿಗೆ ಎಂ.ಎಸ್.ರಾಮಯ್ಯ ಜಂಕ್ಷನ್ ಕಡೆಯಿಂದ ಸದಾಶಿವನಗರ ಕಡೆಗೆ ಬೈಕ್‌ನಲ್ಲಿ ಹೊರಟಿದ್ದ. ಹಿಂಬದಿಯಲ್ಲಿ ಸ್ನೇಹಿತೆ ಕುಳಿತಿದ್ದಳು. ಆರೋಪಿ ಪ್ರತೀಕ್, ಜಂಕ್ಷನ್‌ನಲ್ಲಿ ಸಿಗ್ನಲ್ ಜಂಪ್ ಮಾಡಿ ಮುಂದಕ್ಕೆ ಹೋಗಿದ್ದ. ಸಿಗ್ನಲ್‌ನಲ್ಲಿ ವ್ಯತ್ಯಾಸವಾಗಿರುವುದಾಗಿ ಭಾವಿಸಿದ್ದ ಆತ, ರಸ್ತೆ ಪಕ್ಕದಲ್ಲಿ ಬೈಕ್ ನಿಲ್ಲಿಸಿ ಕರ್ತವ್ಯನಿರತ ಕಾನ್‌ಸ್ಟೆಬಲ್ ಬಳಿ ತೆರಳಿದ್ದ. ‘ಸರಿಯಾಗಿ ಸಿಗ್ನಲ್ ನಿರ್ವಹಿಸಲು ಬರುವುದಿಲ್ಲವೇ?’ ಎಂದು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದ’ ಎಂದು ಮೂಲಗಳು ತಿಳಿಸಿವೆ.

‘ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನು ಕಾನ್‌ಸ್ಟೆಬಲ್ ಹಾಗೂ ಸ್ಥಳೀಯರು ಬೆನ್ನಟ್ಟಿ ಹಿಡಿದು ಠಾಣೆಗೆ ಒಪ್ಪಿಸಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT