ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟ್ರಸ್ಟ್‌ ಸೇವೆಗೆ ಶ್ರದ್ಧೆ, ಬದ್ಧತೆ ಅಗತ್ಯ’

Last Updated 21 ಜುಲೈ 2019, 19:44 IST
ಅಕ್ಷರ ಗಾತ್ರ

ಬೆಂಗಳೂರು: ‘ಉತ್ತಮ ಆರಂಭ ಕಾಣುವ ಟ್ರಸ್ಟ್‌ಗಳ ಕಾರ್ಯಚಟುವಟಿಕೆಗಳುಆನಂತರ ಅನೇಕ ಕಾರಣಗಳಿಗೆ ಕುಂಠಿತ
ಗೊಳ್ಳುವ ಇಲ್ಲವೆ ಸ್ಥಗಿತಗೊಳ್ಳುವ ಅಪಾಯ ಇರುವುದರಿಂದ ಟ್ರಸ್ಟ್ ಸದಸ್ಯರೆಲ್ಲ ಶ್ರದ್ಧೆ ಮತ್ತು ಬದ್ಧತೆಯಿಂದ ಕಾರ್ಯ
ನಿರ್ವಹಿಸಲು ಮನಸ್ಸು ಮಾಡಬೇಕು’ ಎಂದು ‘ಕೆಎಸ್‌ಆರ್‌ಪಿ’ಯ ಎಡಿಜಿಪಿ ಭಾಸ್ಕರ್‌ರಾವ್‌ ಅವರು ಸಲಹೆ ನೀಡಿದರು.

ಭಾನುವಾರ ಇಲ್ಲಿ ದೇವಪ್ರಿಯ ಚಾರಿಟಬಲ್ ಟ್ರಸ್ಟ್‌ (ರಿ) ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ‘ಟ್ರಸ್ಟ್‌ನ ಕಾರ್ಯಚಟುವಟಿಕೆಗಳ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸಾರ್ಹತೆ ಮೂಡಿಸಲು ಸಾಕಷ್ಟು ಪರಿಶ್ರಮ ಪಡಬೇಕಾಗುತ್ತದೆ. ಸಮಯಾವಕಾಶವೂ ಬೇಕಾಗುತ್ತದೆ. ಈ ಹಂತದಲ್ಲಿ ಹಿರಿಯರ ಮಾರ್ಗದರ್ಶನ ಮಹತ್ವದ್ದಾಗಿದೆ. ಎಲ್ಲರನ್ನೂ ಜತೆಯಲ್ಲಿ ಕರೆದುಕೊಂಡು ಹೋಗುವ ಸಮರ್ಥ ನಾಯಕತ್ವವೂ ಬೇಕಾಗುತ್ತದೆ’ ಎಂದರು.

‘ಸವಾಲುಗಳನ್ನು ಒಗ್ಗಟ್ಟಿನಿಂದ ಎದುರಿಸಬೇಕು. ಧ್ಯೇಯೋದ್ದೇಶಗಳಿಗೆ ಅರ್ಧದಲ್ಲಿಯೇ ಎಳ್ಳುನೀರು ಬಿಟ್ಟಿರುವ ಟ್ರಸ್ಟ್‌ಗಳ ಸಾಲಿಗೆ ಇದು ಸೇರದಿರಲಿ. ನಾಲ್ಕು ಜನರಿಗೆ ಪ್ರಯೋಜನವಾಗುವ ಕಾರ್ಯಕ್ರಮಗಳಿಂದ ಟ್ರಸ್ಟ್‌ ಬಗ್ಗೆ ವಿಶ್ವಾಸಾರ್ಹತೆ ಬೆಳೆಯುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT