ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಜಿಸಿಇಟಿ: ಪ್ರಥಮ ರ‍್ಯಾಂಕ್‌ ಪಡೆದವರ ಅಭಿಪ್ರಾಯ

Published 1 ಜೂನ್ 2024, 15:51 IST
Last Updated 1 ಜೂನ್ 2024, 15:51 IST
ಅಕ್ಷರ ಗಾತ್ರ

ನಾನು ಸಿಇಟಿಗಾಗಿ ಓದಲು ಹೆಚ್ಚುವರಿ ಸಮಯ ವ್ಯಯಿಸಿಲ್ಲ. ಚೈತನ್ಯ ಟೆಕ್ನೊ ಸ್ಕೂಲ್‌ನಲ್ಲಿ ಸಿಇಟಿಗಾಗಿ ಪ್ರತ್ಯೇಕ ಕೋರ್ಸ್ ಇದೆ. ಅಲ್ಲೇ ಕಲಿತಿದ್ದು ಬಿಟ್ಟು ಬೇರೆ ಕೋಚಿಂಗ್‌ಗೆ ಹೋಗಿಲ್ಲ. ನೀಟ್‌ ಪರೀಕ್ಷೆ ಬರೆದಿದ್ದೇನೆ. ಅದರ ಫಲಿತಾಂಶಕ್ಕೆ ಕಾಯುತ್ತಿದ್ದೇನೆ. ದೆಹಲಿಯ ಏಮ್ಸ್‌ನಲ್ಲಿ ವೈದ್ಯಕೀಯ ಶಿಕ್ಷಣ ಕಲಿಯುವ ಗುರಿ ಇಟ್ಟುಕೊಂಡಿದ್ದೇನೆ.

-ಕಲ್ಯಾಣ್‌ ವಿ., ಶ್ರೀ ಚೈತನ್ಯ ಟೆಕ್ನೊ ಸ್ಕೂಲ್‌, ಮಾರತ್‌ಹಳ್ಳಿ 

ನರ್ಸಿಂಗ್‌, ಬಿ. ಫಾರ್ಮಾ, ಫಾರ್ಮಾ–ಡಿ, ಪಶುವೈದ್ಯಕೀಯ ಈ ನಾಲ್ಕು ವಿಭಾಗದಲ್ಲಿ ಪ್ರಥಮ ರ‍್ಯಾಂಕ್‌ ಪಡೆದ ವಿದ್ಯಾರ್ಥಿ 

ಸಿಇಟಿಗೆ ತಯಾರಿ ನಡೆಸಲು ನಿತ್ಯ ಒಂದು ಗಂಟೆ ಮೀಸಲಿಟ್ಟಿದ್ದೆ. ಸಿಇಟಿ ಅಲ್ಲದೇ ಕೆ–ಸೆಟ್‌ ಸೇರಿದಂತೆ ಬೇರೆ ಬೇರೆ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಹೇಗಿರುತ್ತವೆ ಎಂದು ನೋಡಿ ಸಿದ್ಧತೆ ಮಾಡಿಕೊಂಡಿದ್ದೆ. ಎಂಜಿನಿಯರಿಂಗ್‌ನಲ್ಲಿ ಮೊದಲ ರ‍್ಯಾಂಕ್‌ ಬಂದಿರುವುದು ಖುಷಿಯಾಗಿದೆ. ಮುಂಬೈ ಅಥವಾ ಚೆನ್ನೈ ಐಐಟಿಯಲ್ಲಿ ಕಂಪ್ಯೂಟರ್‌ ಸೈನ್ಸ್‌ ಮಾಡಬೇಕು. 

-ಹರ್ಷ ಕಾರ್ತಿಕೇಯ ವುಟುಕುರಿ, ನಾರಾಯಣ ಒಲಿಂಪಿಯಾಡ್‌ ಸ್ಕೂಲ್, ಸಹಕಾರ ನಗರ

ಎಂಜಿನಿಯರಿಂಗ್‌ನಲ್ಲಿ ಪ್ರಥಮ ರ‍್ಯಾಂಕ್‌, ಬಿ.ಫಾರ್ಮಾ ಮತ್ತು ಫಾರ್ಮಾ–ಡಿಯಲ್ಲಿ ಎರಡನೇ ರ‍್ಯಾಂಕ್‌ ಪಡೆದವರು.

ಹರ್ಷ ಕಾರ್ತಿಕೇಯ ವುಟುಕುರಿ
ಹರ್ಷ ಕಾರ್ತಿಕೇಯ ವುಟುಕುರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT