ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವತ್ರಿಕ ಪಿಂಚಣಿ: ರಾಜ್ಯಮಟ್ಟದ ವಿಚಾರ ಸಂಕಿರಣ 6ಕ್ಕೆ

Published 2 ಜನವರಿ 2024, 15:44 IST
Last Updated 2 ಜನವರಿ 2024, 15:44 IST
ಅಕ್ಷರ ಗಾತ್ರ

ಬೆಂಗಳೂರು: 60 ವರ್ಷ ದಾಟಿರುವ ಎಲ್ಲರಿಗೂ ಸಾರ್ವತ್ರಿಕ ಪಿಂಚಣಿ ಜಾರಿಗೊಳಿಸಲು ಆಗ್ರಹಿಸಿ ಅಖಿಲ ಭಾರತ ವಿಮಾ ಪಿಂಚಣಿದಾರರ ಸಂಘ ಹಾಗೂ ವಿವಿಧ ಸಂಘಟನೆಗಳು ಜ.6ರಂದು ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿವೆ.

‘ಕೇಂದ್ರ ಸರ್ಕಾರವು ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆಯನ್ನು 2007ರಲ್ಲಿ ಜಾರಿಗೊಳಿಸಿದೆ. ಬಡತನ ರೇಖೆಗಿಂತ ಕೆಳಗಿರುವ, 60 ವರ್ಷ ದಾಟಿರುವ ಹಿರಿಯ ನಾಗರಿಕರಿಗೆ ₹2,000 ನೀಡಲಾಗುತ್ತಿದೆ. 2007ರಿಂದ ಈವರೆಗೆ ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಈ ಪಿಂಚಣಿ ಮೊತ್ತ ಏರಿಕೆಯಾಗಿಲ್ಲ. ಬಡತನ ರೇಖೆಯ ಕೆಳಗಿನ, ಮೇಲಿನ ಎಂದೆಲ್ಲ ವಿಭಾಗ ಮಾಡದೇ ಎಲ್ಲ ಹಿರಿಯರಿಗೆ ಪಿಂಚಣಿ ಜಾರಿ ಮಾಡಬೇಕು. ಯಾವುದೇ ಪಿಂಚಣಿ ಇಲ್ಲದವರಿಗೆ ತಿಂಗಳಿಗೆ ಕನಿಷ್ಠ ₹ 3,000 ನಿಗದಿ ಮಾಡಬೇಕು’ ಎಂಬುದು ಸಂಘಟನೆಗಳ ಆಗ್ರಹವಾಗಿದೆ.

ಎಲ್‌ಐಸಿ, ಜಿಐಸಿ ನೌಕರರ ಮತ್ತು ಪಿಂಚಣಿದಾರರ ಸಂಘಟನೆಗಳಾದ ಅಖಿಲ ಭಾರತ ವಿಮಾ ಪಿಂಚಣಿದಾರರ ಸಂಘ, ವಿಮಾ ಕಾರ್ಪೊರೇಷನ್‌ ನೌಕರರ ಸಂಘ, ವಲಯ ಸಾಮಾನ್ಯ ವಿಮಾ ನೌಕರರ ಸಂಘ, ಸಾಮಾನ್ಯ ವಿಮಾ ಪಿಂಚಣಿದಾರರ ಸಂಘಗಳ ಸಹಯೋಗದಲ್ಲಿ ಜ.6ರಂದು ಬೆಳಿಗ್ಗೆ 10ಕ್ಕೆ ಕಬ್ಬನ್‌ ಪಾರ್ಕ್‌ ಎನ್‌ಜಿಒ ಸಭಾಂಗಣದಲ್ಲಿ ಈ ಬಗ್ಗೆ ರಾಜ್ಯಮಟ್ಟದ ವಿಚಾರ ಸಂಕಿರಣ ನಡೆಯಲಿದೆ. ಆರ್ಥಿಕ ತಜ್ಞ ಪ್ರಭಾತ್‌ ಪಟ್ನಾಯಕ್‌ ಉದ್ಘಾಟಿಸಲಿದ್ದಾರೆ ಎಂದು ಸಂಘಟನೆಗಳ ಪದಾಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT