ಶಿಕ್ಷಣದಲ್ಲಿ ಲಿಬರಲ್‌ ಆರ್ಟ್ಸ್‌ ಸೇರಿಸಿ: ಎಂ.ಎನ್‌.ವೆಂಕಟಾಚಲಯ್ಯ ಅಭಿಮತ

5
ನಿವೃತ್ತ ಮುಖ್ಯ ನ್ಯಾಯಮೂರ್ತಿ

ಶಿಕ್ಷಣದಲ್ಲಿ ಲಿಬರಲ್‌ ಆರ್ಟ್ಸ್‌ ಸೇರಿಸಿ: ಎಂ.ಎನ್‌.ವೆಂಕಟಾಚಲಯ್ಯ ಅಭಿಮತ

Published:
Updated:
Deccan Herald

ಬೆಂಗಳೂರು: ‘ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಪಠ್ಯಕ್ರಮದಲ್ಲಿ ಲಿಬರಲ್‌ ಆರ್ಟ್ಸ್‌ ವಿಷಯಗಳನ್ನು ಸೇರಿಸಬೇಕು’ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ ಹೇಳಿದರು. 

ಗ್ರಾಮ್‌ ಸಂಸ್ಥೆಯ ಅಧ್ಯಕ್ಷ ಡಾ. ಆರ್‌.ಬಾಲಸುಬ್ರಹ್ಮಣ್ಯಂ ಅವರ ‘ವಾಯ್ಸಸ್‌ ಫ್ರಂ ದಿ ಗ್ರಾಸ್‌ರೂಟ್ಸ್‌’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. 

‘ಲಿಬರಲ್‌ ಆರ್ಟ್ಸ್‌ ಪರಿಕಲ್ಪನೆಯಲ್ಲಿ ಕಲೆ, ಸಾಹಿತ್ಯ, ಸಂಗೀತ, ಮನೋವಿಜ್ಞಾನ, ತತ್ವಶಾಸ್ತ್ರ ವಿಷಯಗಳು ಇರುತ್ತವೆ. ಇದರಲ್ಲಿ ಹೊಸ ಕಲಿಕೆಗೆ ಅವಕಾಶ ಇರುತ್ತದೆ, ಅಂಥ ಶಿಕ್ಷಣ ವ್ಯವಸ್ಥೆ ಜಾರಿಗೆ ಬರಬೇಕು’ ಎಂದರು.

‘ನಾವಿಂದು ಸಿಂಗಪುರದ ವ್ಯವಸ್ಥೆ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ, ಆ ಮಟ್ಟದ ಕಾರ್ಯಕ್ಷಮತೆ ಮತ್ತು ಅಭಿವೃದ್ಧಿ  ಪರಿಕಲ್ಪನೆಗಳು ನಮ್ಮಲ್ಲಿವೆಯೇ ಎಂದು ಪ್ರಶ್ನಿಸಿಕೊಳ್ಳಬೇಕಾಗುತ್ತದೆ. ಭಾರತದ ವ್ಯವಸ್ಥೆಯಲ್ಲಿ ಅಭಿವೃದ್ಧಿ ಬೇಕಾದರೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮರೆತುಬಿಡಿ ಎಂಬಂತಾಗಿದೆ. ಕಾರ್ಪೊರೇಟ್‌ ಶಕ್ತಿಗಳು ವ್ಯವಸ್ಥೆಯನ್ನು ಹಿಡಿತಕ್ಕೆ ತೆಗೆದುಕೊಳ್ಳುತ್ತಿವೆ. ಕಾರ್ಪೊರೇಟ್‌ ಸಾಮಾಜಿಕ ಜವಾಬ್ದಾರಿ ಅಡಿ ಶೇ 2ರಷ್ಟು ಪಾಲನ್ನು ಸಾಮಾಜಿಕ ಕಾರ್ಯಗಳಿಗೆ ಕೊಡುತ್ತಾರೆ. ಇನ್ನುಳಿದ ಶೇ 98 ಭಾಗದಲ್ಲಿ ತಾವು ಏನು ಬೇಕಾದರೂ ಮಾಡಿಕೊಳ್ಳಬಹುದು ಎಂಬ ಭಾವನೆ ಅವರಲ್ಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು. 

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !