ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೈಯಪ್ಪನಹಳ್ಳಿ ಯಾರ್ಡ್‌ನಲ್ಲಿ ಕಾಮಗಾರಿ: ರೈಲು ರದ್ದು

Published 23 ಮಾರ್ಚ್ 2024, 0:09 IST
Last Updated 23 ಮಾರ್ಚ್ 2024, 0:09 IST
ಅಕ್ಷರ ಗಾತ್ರ

ಬೆಂಗಳೂರು: ಬೈಯಪ್ಪನಹಳ್ಳಿ ಯಾರ್ಡ್‌ನಲ್ಲಿ ಕಾಮಗಾರಿ ಕೈಗೊಳ್ಳಲಿರುವುದರಿಂದ ಏ.1ರಿಂದ 5ರ ವರೆಗೆ ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದ್ದು, ಇನ್ನು ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಯಾರ್ಡ್‌ನಲ್ಲಿ ಬಾಣಸವಾಡಿ-ಕರ್ಮಮೇಳಂ ಮಾರ್ಗದಲ್ಲಿ ಬಾಕ್ಸ್ ಸೇತುವೆ ನಿರ್ಮಾಣಕ್ಕಾಗಿ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಅಳವಡಿಸುವ ಕಾಮಗಾರಿ ನಡೆಯಲಿದೆ. 

ಯಶವಂತಪುರ–ಸೇಲಂ–ಯಶವಂತಪುರ ಎಕ್ಸ್‌ಪ್ರೆಸ್‌, ಮೈಸೂರು–ಯಶವಂತಪುರ–ಮೈಸೂರು ಎಕ್ಸ್‌ಪ್ರೆಸ್‌, ಯಶವಂತಪುರ– ತುಮಕೂರು–ಯಶವಂತಪುರ ಮೆಮು, ಯಶವಂತಪುರ-ಹೊಸೂರು–ಯಶವಂತಪುರ ಮೆಮು ವಿಶೇಷ ರೈಲು, ಯಶವಂತಪುರ–ಚಿಕ್ಕಬಳ್ಳಾಪುರ–ಯಶವಂತಪುರ ಮೆಮು ರೈಲುಗಳ ಸಂಚಾರ ಈ ಸಮಯದಲ್ಲಿ ರದ್ದಾಗಲಿದೆ.

ಮಾರ್ಗ ಬದಲಾವಣೆ: ಕಣ್ಣೂರು–ಯಶವಂತಪುರ–ಕಣ್ಣೂರು ಎಕ್ಸ್‌ಪ್ರೆಸ್‌ ರೈಲು, ಯಶವಂತಪುರ-ಕೊಚುವೇಲಿ–ಯಶವಂತಪುರ ಎಕ್ಸ್‌ಪ್ರೆಸ್‌ ರೈಲು ಕಾರ್ಮೆಲರಾಂ, ಬೈಯಪ್ಪನಹಳ್ಳಿ ಕ್ಯಾಬಿನ್‌, ಬೈಯಪ್ಪನಹಳ್ಳಿ, ಬೆಂಗಳೂರು ಎಸ್‌ಎಂವಿಟಿ ಮತ್ತು ಬಾಣಸವಾಡಿ ಮಾರ್ಗ ಮೂಲಕ ಸಂಚರಿಸಲಿದೆ.

ಯಶವಂತಪುರ-ಕೊಚುವೇಲಿ-ಯಶವಂತಪುರ ಎಕ್ಸ್‌ಪ್ರೆಸ್‌, ದಾದರ್-ತಿರುನೆಲ್ವೇಲಿ–ದಾದರ್‌ ಎಕ್ಸ್‌ಪ್ರೆಸ್‌, ಕೊಚುವೇಲಿ-ಯಶವಂತಪುರ–ಕೊಚುವೇಲಿ ರೈಲು ಬಾಣಸವಾಡಿ, ಎಸ್ಎಂವಿಟಿ ಬೆಂಗಳೂರು, ಬೈಯಪ್ಪನಹಳ್ಳಿ, ಬೈಯಪ್ಪನಹಳ್ಳಿ ಕ್ಯಾಬಿನ್, ಕಾರ್ಮೆಲರಾಂ ಮತ್ತು ಹೊಸೂರು ಮಾರ್ಗವಾಗಿ ಸಂಚರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT