ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಹಂಕ ನ್ಯೂಟೌನ್‌: ನೀರಿನ ತೊಟ್ಟಿಯಲ್ಲಿ ಮುಳುಗಿ ತಾಯಿ, ಮಗು ಸಾವು

Published 18 ಏಪ್ರಿಲ್ 2024, 19:58 IST
Last Updated 18 ಏಪ್ರಿಲ್ 2024, 19:58 IST
ಅಕ್ಷರ ಗಾತ್ರ

ಬೆಂಗಳೂರು: ಯಲಹಂಕ ನ್ಯೂಟೌನ್‌ ಪೊಲೀಸ್ ಠಾಣಾ ವ್ಯಾಪ್ತಿಯ ಸುಗ್ಗಪ್ಪಲೇಔಟ್‌ನ ಖಾಲಿ ನಿವೇಶನದಲ್ಲಿದ್ದ ನೀರಿನ ತೊಟ್ಟಿಯಲ್ಲಿ ಮುಳುಗಿ ತಾಯಿ ಹಾಗೂ ಮಗು ಮೃತಪಟ್ಟಿದ್ದಾರೆ.

ಕಾರ್ಮಿಕ ಮಹಿಳೆ ಕವಿತಾ (30) ಹಾಗೂ ಅವರ ಆರು ವರ್ಷದ ಮಗ ಪವನ್‌ ಮೃತಪಟ್ಟವರು.

‘ಗುರುವಾರ ಸಂಜೆ ಘಟನೆ ನಡೆದಿದೆ. ಖಾಲಿ ನಿವೇಶನದಲ್ಲಿ ಮಗು ಆಟ ಆಡುತ್ತಿತ್ತು. ಆಗ ಆಕಸ್ಮಿಕವಾಗಿ ನೀರಿನ ತೊಟ್ಟಿಗೆ ಬಿದ್ದಿದೆ. ಮಗುವನ್ನು ರಕ್ಷಿಸಲು ತಾಯಿ ಸಹ ನೀರಿನ ತೊಟ್ಟಿಗೆ ಇಳಿದಿದ್ದರು. ಇಬ್ಬರೂ ಮೇಲಕ್ಕೆ ಬರಲು ಸಾಧ್ಯವಾಗದೇ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಕವಿತಾ ಅವರ ಮನೆಯಲ್ಲಿದ್ದ ಸಂಬಂಧಿಯೊಬ್ಬರ ಮಗು ಪಕ್ಕದ ಮನೆಯವರಿಗೆ ಮಾಹಿತಿ ನೀಡಿತ್ತು. ಅವರು ಬಂದು ರಕ್ಷಿಸುವಷ್ಟರಲ್ಲಿ ಇಬ್ಬರೂ ಮೃತಪಟ್ಟಿದ್ದರು’ ಎಂದು ಪೊಲೀಸರು ಹೇಳಿದರು.

ಗೌರಿಬಿದನೂರಿನ ಚೆಂದನೂರಿನ ಕವಿತಾ ಅವರು ಯಲಹಂಕದ ನ್ಯೂಟೌನ್‌ನ ಸುಗ್ಗಪ್ಪಲೇಔಟ್‌ನ ಮಾಲೀಕರೊಬ್ಬರ ಮನೆಯಲ್ಲಿ ಕೆಲಸಕ್ಕಿದ್ದರು. ಮಾಲೀಕರಿಗೆ ಸೇರಿದ ನಿವೇಶನದಲ್ಲಿ ನೀರಿನ ತೊಟ್ಟಿಯಿತ್ತು. ಅದರಲ್ಲಿ ಬಿದ್ದು ಇಬ್ಬರೂ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT