ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಬಿಬಿಎಂಪಿ ವ್ಯಾಪ್ತಿಯ ಮೈದಾನಗಳಲ್ಲಿ ಪಟಾಕಿ ಮಳಿಗೆಗಳಿಗೆ ಪರವಾನಗಿ ನೀಡಲು ಪೊಲೀಸ್ ಇಲಾಖೆಯು ಅರ್ಜಿ ಆಹ್ವಾನಿಸಿದೆ.
ಮೈಸೂರು ರಸ್ತೆಯಲ್ಲಿರುವ ನಗರ ಸಶಸ್ತ್ರ ಮೀಸಲು ಪಡೆ ಕೇಂದ್ರ ವಿಭಾಗದ ಡಿಸಿಪಿ ಕಚೇರಿಯಲ್ಲಿ ಅರ್ಜಿ ಪಡೆಯಬಹುದು. ಬಳಿಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆ ಡಿಜಿಪಿ ಅಥವಾ ನಿರ್ದೇಶಕರ ಕಚೇರಿಗೆ ಸಂದಾಯವಾಗುವಂತೆ ಎರಡು ಸಾವಿರ ರೂಪಾಯಿಯ ಡಿಮಾಂಡ್ ಡ್ರಾಫ್ಟ್ (ಡಿ.ಡಿ) ತೆಗೆಯಬೇಕು. ಜತೆಗೆ ನಗರ ಪೊಲೀಸ್ ಕಮಿಷನರ್ ಕಚೇರಿಗೆ ಸಂದಾಯವಾಗುವಂತೆಯೂ ಒಂದು ಸಾವಿರ ರೂಪಾಯಿ ಮೊತ್ತದ ಡಿ.ಡಿ ಪಡೆಯಬೇಕು ಎಂದು ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.