ಬೆಂಗಳೂರು: ಎಂ.ಇ, ಎಂ.ಟೆಕ್, ಕೋರ್ಸ್ಗಳ ಪ್ರವೇಶಾತಿ ಗಾಗಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಪಿಜಿಇಸಿಟಿ) ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಮಾಡಿರುವ ಸೀಟು ಆಯ್ಕೆಯಲ್ಲಿ ಬದಲಾವಣೆ ಮಾಡಲು ಅಭ್ಯರ್ಥಿಗಳಿಗೆ ನೀಡಲಾಗಿದ್ದ ಗಡುವನ್ನು ಸೋಮವಾರ ಬೆಳಗ್ಗೆ 10ಗಂಟೆವರೆಗೆ (ಸೆಪ್ಟೆಂಬರ್ 1) ವಿಸ್ತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ವಿವರಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ಗೆ (kea.kar.nic.in) ಭೇಟಿ ನೀಡಬಹುದು ಎಂದೂ ಪ್ರಕಟಣೆ ಹೇಳಿದೆ.