ಬೆಂಗಳೂರು: ಹಿರಿಯ ಸಾಹಿತಿ, ಸಂಶೋಧಕ ಪ್ರೊ. ಹಂಪನಾ ಅವರಿಗೆ ಜೆಕ್ ಗಣರಾಜ್ಯದ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ಆಹ್ವಾನ ಬಂದಿದೆ.
ಜೆಕ್ ರಾಜಧಾನಿ ಪ್ರಾಗ್ನ ಚಾರ್ಲ್ಸ್ ವಿಶ್ವವಿದ್ಯಾನಿಲಯದ ‘ಧರ್ಮಗಳ ತೌಲನಿಕ ಅಧ್ಯಯನ’ ವಿಭಾಗದಲ್ಲಿ ಅ.14, 15 ಮತ್ತು 16ರಂದು ಕ್ರಮವಾಗಿ ಕನ್ನಡ ಭಾಷೆ, ಕನ್ನಡ ಸಾಹಿತ್ಯ ಮತ್ತು ಕನ್ನಡ ಸಂಸ್ಕೃತಿ ಕುರಿತು ಹಂಪನಾ ಉಪನ್ಯಾಸ ನೀಡಲಿದ್ದಾರೆ.