ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷರ ಬಿತ್ತಣಿಕೆ ಸಮಾರಂಭ

Published 10 ಮೇ 2024, 15:53 IST
Last Updated 10 ಮೇ 2024, 15:53 IST
ಅಕ್ಷರ ಗಾತ್ರ

ಬಸವಕಲ್ಯಾಣ: ಲಿಂಗಾಯತ ಧರ್ಮಕೇಂದ್ರ ಮತ್ತು ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದಿಂದ ಶುಕ್ರವಾರ ಬಸವಜಯಂತಿ ಅಂಗವಾಗಿ ನಗರದ ಬಸವಣ್ಣನವರ ಪರುಷಕಟ್ಟೆಯಲ್ಲಿ ಅಕ್ಷರ ಬಿತ್ತಣಿಕೆ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಹರಳಯ್ಯ ಪೀಠಾಧ್ಯಕ್ಷೆ ಅಕ್ಕ ಗಂಗಾಂಬಿಕಾ ಅವರು ಮಕ್ಕಳ ಮೇಲೆ ಲಿಂಗೋದಕ ಸಿಂಪಡಿಸಿ ರುದ್ರಾಕ್ಷಿ ಕಂಕಣ ಕಟ್ಟಿ ಅವರಿಗೆ ಕಿವಿಯಲ್ಲಿ ಮಂತ್ರ ಹೇಳಿದರು. ನಂತರ ಪಾಟಿಯ ಮೇಲೆ ‘ಓಂ ಬಸವ’ ಎಂದು ಬರೆಯಿಸಿ ಅಕ್ಷರಾಭ್ಯಾಸ ಮಾಡಿಸಿದರು.

ನಂತರ ಮಾತನಾಡಿದ ಅವರು, ‘ಮಕ್ಕಳನ್ನು ದಿವ್ಯ ಮಾನವರಾಗಿಸುವ ವಿದ್ಯೆ ಸಂಪಾದನಾ ಕಾರ್ಯಕ್ಕೆ ಬಸವ ಜಯಂತಿಯ ಅಕ್ಷಯ ತೃತೀಯದಂದು ಚಾಲನೆ ನೀಡಿದರೆ ಜ್ಞಾನದ ಮಹಾದ್ವಾರ ತೆರೆಯುತ್ತದೆ. ಈ ದಿನ ಕೈಗೊಂಡ ಪ್ರತಿಯೊಂದು ಕೆಲಸ ಪೂರ್ಣ ಫಲ ನೀಡುತ್ತದೆ’ ಎಂದರು.

ರಾಷ್ಟ್ರೀಯ ಬಸವದಳದ ತಾಲ್ಲೂಕು ಅಧ್ಯಕ್ಷ ರವೀಂದ್ರ ಕೊಳಕೂರ, ಬಸವೇಶ್ವರ ದೇವಸ್ಥಾನ ಸಮಿತಿ ನಿರ್ದೇಶಕ ರೇವಣಪ್ಪ ರಾಯವಾಡೆ, ಜಗನ್ನಾಥ ಖೂಬಾ, ಪ್ರಮುಖರಾದ ಸುಲೋಚನಾ ಮಾಮಾ, ಕಲ್ಯಾಣಮ್ಮ, ಸೋನಾಲಿ ನೀಲಕಂಠೆ, ಮೀನಾ ಜಾಧವ, ಕವಿತಾ ಮೂಲಗೆ. ಕವಿತಾ ಸಜ್ಜನ್, ರಾಜೇಶ್ವರಿ ನಾಗರಾಳೆ, ಮಹಾನಂದಾ ಗುಂಗೆ, ಸವಿತಾ ರಗಟೆ, ಸುಜಾತಾ ಉಪಸ್ಥಿತರಿದ್ದರು. ರಂಜನಾ ಭೂಶೆಟ್ಟಿ ವಚನಸಂಗೀತ ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT