ಬ್ರಿಟಿಷರ ವಿರುದ್ಧ ಸಿಡಿದೆದ್ದಿದ್ದ ಅಂಬೇಡ್ಕರ್- ಪ್ರೊ.ಜೋಗೇಂದ್ರ ಕವಾಡೆ

ಬಸವಕಲ್ಯಾಣ: ‘ಅಂಬೇಡ್ಕರ್ ಅವರು ಬ್ರಿಟಿಷರ ನೆಲದಲ್ಲಿಯೇ ಹೋಗಿ ಭಾರತ ಬಿಟ್ಟು ತೊಲಗುವಂತೆ ಎಚ್ಚರಿಕೆ ನೀಡಿ ಮಹಾತ್ಮ ಗಾಂಧೀಜಿ ಅವರಿಂದ ಶ್ಲಾಘನೆಗೆ ಒಳಗಾಗಿದ್ದರು' ಎಂದು ಪೀಪಲ್ಸ್ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಪ್ರೊ.ಜೋಗೇಂದ್ರ ಕವಾಡೆ ಹೇಳಿದರು.
ತಾಲ್ಲೂಕಿನ ಹಾರಕೂಡದಲ್ಲಿ ಶುಕ್ರವಾರ ದಿ ಗ್ರೇಟ್ ಮಹಾರ್ ಸೇವಾ ಸಮಿತಿ ಹಾಗೂ ಭೀಮನಗರದಿಂದ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಕೆಲವರು ಸಂವಿಧಾನ ಬದಲಾವಣೆಯ ಮಾತು ಆಡುತ್ತಾರೆ. ಹೀಗಾದರೆ ಜಾತಿ, ಧರ್ಮದ ಆಧಾರದಲ್ಲಿ ದೇಶದಲ್ಲಿ ಒಡಕು ಮೂಡುವುದು ನಿಶ್ಚಿತ. ಅನ್ಯ ಜಾತಿಯವರು ಮತ್ತು ಮಠಾಧೀಶರು ಜಾತಿವಾದದ ಮುಕ್ತಿಗೆ ಪ್ರಯತ್ನಿಸಬೇಕು’ ಎಂದರು.
ಚನ್ನವೀರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಶಾಸಕ ಶರಣು ಸಲಗರ, ದಲಿತ ಮುಖಂಡ ಪ್ರಕಾಶ ಮೂಲಭಾರತಿ, ಎಐಸಿಸಿ ಸದಸ್ಯ ಆನಂದ ದೇವಪ್ಪ, ರಕ್ಷಿತಾ ದಾಮಾ, ಸತ್ಯವಾನ ಕಾಂಬಳೆ, ಚನ್ನಪ್ಪ ಹೊಳ್ಕರ್ ಮಾತನಾಡಿದರು. ಮಲ್ಲಿಕಾರ್ಜುನ ಗುಡ್ಡೆ, ರಾಜೇಶ ಖನ್ನಾರನ್ನು ಸನ್ಮಾನಿಸಲಾಯಿತು.
ಮಹಾರ್ ಸೇವಾ ಸಮಿತಿ ಅಧ್ಯಕ್ಷ ಪ್ರಕಾಶ ಸುಂಠಾಣೆ, ಮುಖಂಡ ಶ್ರೀಕಾಂತ ಕಾಂಬಳೆ, ಸಿದ್ರಾಮಪ್ಪ ಗುದಗೆ, ಮೇಘರಾಜ ನಾಗರಾಳೆ, ಸಿದ್ರಾಮ ಹೆಗಡೆ, ಅಣ್ಣಪ್ಪ ಶಿಂಗೆ. ವಿಜಯಕುಮಾರ ಸಂಗೊಳಗಿ, ಆನಂದರಾವ್ ಝಳಕಿ, ದಿಲೀಪ ಕ್ಷೀರಸಾಗರ, ಅಪ್ಪಣ್ಣ ಶಿಂಧೆ, ರಾಜೀವ ಶಂಕಾ, ಪ್ರಕಾಶ ನಾಗನಹಳ್ಳಿ, ಭೀಮಶಾ ಬಗದೂರಿ
ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.