ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಜಿಲ್ಲಾಮಟ್ಟದ ‘ಗ್ಯಾರಂಟಿ’ ಪ್ರಾಧಿಕಾರಕ್ಕೆ ಚಿಮಕೋಡೆ ಅಧ್ಯಕ್ಷ

Published 19 ಮಾರ್ಚ್ 2024, 16:11 IST
Last Updated 19 ಮಾರ್ಚ್ 2024, 16:11 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲಾಮಟ್ಟದ ‘ಗ್ಯಾರಂಟಿ’ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾಗಿ ಕಾಂಗ್ರೆಸ್‌ ಮುಖಂಡ ಅಮೃತರಾವ ಚಿಮಕೋಡೆ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಚುನಾವಣೆ ನೀತಿ ಸಂಹಿತೆ ಜಾರಿಗೆ ಮುನ್ನವೇ, ಮಾ. 12ರಂದು ಸರ್ಕಾರ ಆದೇಶ ಹೊರಡಿಸಿದ್ದು, ಮಂಗಳವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ. ಸರ್ಕಾರದ ಐದು ‘ಗ್ಯಾರಂಟಿ’ಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾಮ್ಟಟದಲ್ಲಿ ಪ್ರಾಧಿಕಾರ ರಚಿಸಲಾಗಿದೆ.

ಪ್ರಾಧಿಕಾರದ ಪದಾಧಿಕಾರಿಗಳು:

ಪೂಜಾ ಜಾರ್ಜ್‌, ಮಹಮೂದ್‌ ಖಾನ್‌ ದುರಾನಿ, ಉದಯಕುಮಾರ್‌ ವರದ್‌, ಲತಾ ಹರಕೋಡೆ, ಮಾರುತಿ ಭಂಗೂರೆ (ಉಪಾಧ್ಯಕ್ಷರು), ಹನುಮಂತರಾವ್‌, ಅಹಮ್ಮದ್‌ ಮೈನೊದ್ದೀನ್‌, ಶ್ರೀನಿವಾಸ್‌ ಮೇತ್ರೆ, ಅಮರ್‌, ರಾಜಕುಮಾರ ಪಾಟೀಲ, ಮೊಹಮ್ಮದ್‌ ರಿಯಾಜ್‌, ಬಸವರಾಜ ಬುಯ್ಯ, ಜೀತೇಂದ್ರ ಕಾಂಬ್ಳೆ, ರಾಜಕುಮಾರ ಮಡಕೆ, ಸಂಗ್ರಾಮಪ್ಪ, ಅಬ್ದುಲ್‌ ಸಾಜಿದ್‌ ಪಾಶಾ, ಚೆನ್ನಪ್ಪ ಉಪ್ಪೆ, ಆನಂದ್‌ ಚವಾಣ್‌, ರಾಮಣ್ಣ ಒಡೆಯರ್‌, ಮಹೇಶ ಪಾಟೀಲ (ಸದಸ್ಯರು), ಬೀದರ್‌ ಹೆಚ್ಚುವರಿ ಜಿಲ್ಲಾಧಿಕಾರಿ (ಸದಸ್ಯ ಕಾರ್ಯದರ್ಶಿ).

ಸಂಭ್ರಮಾಚರಣೆ: ಅಮೃತರಾವ್‌ ಚಿಮಕೋಡೆ ಅವರು ‘ಗ್ಯಾರಂಟಿ’ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು, ಕಾಂಗ್ರೆಸ್‌ ಕಾರ್ಯಕರ್ತರು ನಗರದ ಪ್ರಮುಖ ವೃತ್ತಗಳಲ್ಲಿ ಸಂಭ್ರಮಾಚರಣೆ ಮಾಡಿದರು. ಚಿಮಕೋಡೆ ಅವರಿಗೆ ಹೂಮಾಲೆ ಹಾಕಿ, ಸಿಹಿ ತಿನ್ನಿಸಿ ಶುಭ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT