ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಜನರ ಬದಲಾದ ಜೀವನ ಶೈಲಿಗೆ ಅನೀಮಿಯಾ’

Published 22 ನವೆಂಬರ್ 2023, 15:33 IST
Last Updated 22 ನವೆಂಬರ್ 2023, 15:33 IST
ಅಕ್ಷರ ಗಾತ್ರ

ಬೀದರ್‌: ‘ಜನರ ಬದಲಾದ ಜೀವನ ಶೈಲಿಯಿಂದ ಅನೀಮಿಯಾ ಹೆಚ್ಚಾಗಿ ಕಂಡು ಬರುತ್ತಿದೆ’ ಎಂದು ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿರಣ ಪಾಟೀಲ ಹೇಳಿದರು.

ನಗರದ ಕರ್ನಾಟಕ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ರಕ್ತಹೀನತೆ ಮುಕ್ತ ಪೌಷ್ಟಿಕ ಕರ್ನಾಟಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಪ್ಯಾಕಿಂಗ್‌ ಫುಡ್‌, ಫಾಸ್ಟ್‌ ಫುಡ್‌ನಂತಹ ಆಹಾರ ಪದಾರ್ಥಗಳ ಸೇವನೆ ಬಿಡಬೇಕು. ಮೊಳಕೆ ಕಾಳು, ತರಕಾರಿ ಹಾಗೂ ಹಣ್ಣುಗಳನ್ನು ಹೆಚ್ಚಿಗೆ ಸೇವಿಸಬೇಕು’ ಎಂದು ತಿಳಿಸಿದರು.

ಆರ್.ಬಿ.ಎಸ್.ಕೆ ವೈದ್ಯಾಧಿಕಾರಿ ಡಾ.ಶೈಲಜಾ ಚನ್ನಶೆಟ್ಟಿ ಮಾತನಾಡಿ,‘ಅನೀಮಿಯಾ ಇದು ರಕ್ತದಲ್ಲಿ ಕೆಂಪು ರಕ್ತಕಣಗಳು ಹಾಗೂ ಹಿಮೊಗ್ಲೋಬಿನ್ ಕಡಿಮೆಯಾಗುವುದರಿಂದ ಬರುತ್ತದೆ. ಇದರಿಂದ ಸುಸ್ತು, ನಿಶಕ್ತಿ, ಉಸಿರಾಟದ ತೊಂದರೆ, ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ ಕಂಡುಬರುತ್ತದೆ. ಎಲ್ಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹಿಮೊಗ್ಲೋಬಿನ್ ಉಚಿತವಾಗಿ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಗುತ್ತದೆ. ಇದನ್ನು ಆರು ಹಂತದಲ್ಲಿ ನಡೆಸಲಾಗುತ್ತದೆ. ಈ ಕಾರ್ಯಕ್ರಮ ಯಶಸ್ವಿಗೊಳಲು ಆರೋಗ್ಯ ಇಲಾಖೆಯ ಸಿಬ್ಬಂದಿಯ ಜೊತೆಯಲ್ಲಿ ಶಿಕ್ಷಣಾ ಇಲಾಖೆ ಹಾಗೂ ಪೋಷಕರ ಪಾತ್ರವ ಬಹುಮುಖ್ಯವಾಗಿದೆ’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ.,‘ಅನೀಮಿಯಾ ಒಂದು ಕೊರತೆಯಾಗಿದೆ. ಇದನ್ನು ನಿರ್ಲಕ್ಷಿಸಿದಲ್ಲಿ ಅನೇಕ ರೋಗಗಳಿಗೆ ದಾರಿ ಮಾಡಿಕೊಡುತ್ತದೆ. ಜನರಿಗೆ ಇದರ ಬಗ್ಗೆ ಅರಿವು ಮೂಡಿಸಬೇಕು’ ಎಂದು ತಿಳಿಸಿದರು.

ಪ್ರಭಾರ ಆರ್.ಸಿ.ಎಚ್ ಡಾ.ರಾಜಶೇಖರ ಪಾಟೀಲ, ಡಿ.ಎಂ. ಡಾ.ದೀಲಿಪ್ ಡೋಗೆ, ಡಿ.ಎಫ್.ಡಬ್ಲ್ಯೂ. ಡಾ. ಶಂಕರೆಪ್ಪಾ ಬೊಮ್ಮಾ, ಡಿ.ಎಸ್.ಒ, ಶಿವರಾಜ್, ಪ್ರಾಚಾರ್ಯ ಬಸವರಾಜ ಬಲ್ಲೂರು, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸಂಗಾರೆಡ್ಡಿ, ಮುಡಬಿ ಡಿ.ಇ.ಐ.ಸಿ ವ್ಯವಸ್ಥಾಪಕಿ ಡಾ. ಜೈಶಾಲಿನಿ, ಆರ್.ಬಿ.ಎಸ್.ಕೆ ವೈದ್ಯಾಧಿಕಾರಿ ಡಾ. ಅರ್ಚನಾ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಉಮೇಶ ಬಿರಾದಾರ, ಜಿಲ್ಲಾ ಕಾರ್ಯಕ್ರಮ ಸಂಯೋಜಕ ಶಿವಶಂಕರ ಬೇಮಳಗಿ, ಡಾ.ಜ್ಯೋತಿ ಪಾಟೀಲ, ಡಾ.ವೈಶಾಲಿ, ಡಾ. ಮಲ್ಲಿಕಾರ್ಜುನ, ಡಾ.ನಿಶಾತ್ ಫಾತೀಮಾ, ಗಂಗಾಧರ ಕಾಂಬಳೆ, ಭಾಗ್ಯಲಕ್ಷ್ಮಿ, ಅಶೋಕ, ವಿನಾಯಕ, ಸುಸನ್ನಾ ದೇವಿದಾಸ, ತಾರಾದೇವಿ, ಚನ್ನಬಸವ, ಸನ್ನಿಪಾಲ್  ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT