ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಬಂದರೆ ಮುಸ್ಲಿಮರು ಹಿಂದೂಗಳ ಮನೆಗೆ ಹೊಕ್ಕಿ ಹೊಡೆಯುತ್ತಾರೆ: ಯತ್ನಾಳ

Published 28 ಏಪ್ರಿಲ್ 2024, 12:37 IST
Last Updated 28 ಏಪ್ರಿಲ್ 2024, 12:37 IST
ಅಕ್ಷರ ಗಾತ್ರ

ಬೀದರ್‌: ‘ದೇಶದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಮುಸ್ಲಿಮರು ಹಿಂದೂಗಳ ಮನೆಗೆ ಹೊಕ್ಕಿ ಹೊಡೆಯುತ್ತಾರೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಹಿಂದೂಗಳ ಸಾವು ಆದಾಗ ಕಾಂಗ್ರೆಸ್‌ನವರು ಅವರ ಮನೆಗೆ ಹೋಗುವುದಿಲ್ಲ. ನೇಹಾ ಬದಲು ಮುಸ್ಲಿಮರ ಹತ್ಯೆಯಾಗಿದ್ದರೆ ರಾಹುಲ್ ಗಾಂಧಿ ಅವರ ಮನೆಗೆ ಹೋಗುತ್ತಿದ್ದರು. ಹಿಂದೂಗಳ, ದಲಿತರ ಕೊಲೆಯಾದರೆ ಕಾಂಗ್ರೆಸ್ ಅವರ ಮನೆಗೆ ಹೋಗುವುದಿಲ್ಲ ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಕಾಂಗ್ರೆಸ್ ಕಾರ್ಪೊರೇಟ್, ಕಾಂಗ್ರೆಸ್ ‌ಕಾರ್ಯಕರ್ತರನ್ನು ಆ ಪಕ್ಷ ರಕ್ಷಿಸುವುದಿಲ್ಲ. ಕಾಂಗ್ರೆಸ್ ಸರ್ಕಾರ ಭಾರತದಲ್ಲಿರುವ ಕರ್ನಾಟಕದ ಸರ್ಕಾರ ಅಲ್ಲ, ಬದಲಾಗಿ ಪಾಕಿಸ್ತಾನದಲ್ಲಿರುವ ಒಂದು ರಾಜ್ಯ ಸರ್ಕಾರವಾಗಿದೆ ಎಂದರು.

ನೇಹಾ ಕೊಲೆ ಪ್ರಕರಣವನ್ನು ಸಿಬಿಐಗೆ ಕೊಡಿ ಎಂದು ಕೇಳಿದರೆ ಸಿಐಡಿಗೆ ಕೊಟ್ಟಿದ್ದಾರೆ. ಸಿಐಡಿಯವರು ಮುಖ್ಯಮಂತ್ರಿ ಹೇಳಿದ ಹಾಗೆ ಕೇಳುತ್ತಾರೆ. ಕೇಸ್ ದಾರಿ ತಪ್ಪಿಸುತ್ತಾರೆ. ಕಾಂಗ್ರೆಸ್ ಪಕ್ಷಕ್ಕೆ ಚೊಂಬು ಹಿಡಿಯುವ ಕಾಲ ಬಂದಿದೆ. 2024 ರಲ್ಲಿ ಪುನಃ ಮೋದಿ ಗೆಲ್ಲುತ್ತಾರೆ.

ಸೋನಿಯಾ ಗಾಂಧಿ ಸೇರಿದಂತೆ ಆ ಪಕ್ಷದ ಎಲ್ಲರಿಗೂ ಮೋದಿ ಚೊಂಬು ಕೊಡುತ್ತಾರೆ ಎಂದು ವ್ಯಂಗ್ಯವಾಗಿ ಹೇಳಿದರು.

‌ಮೋದಿ ದೇಶಕ್ಕೆ ‌ಏನು ಮಾಡಿದ್ದಾರೆಂದು ಇಡೀ ವಿಶ್ವಕ್ಕೆ ಗೊತ್ತಿದೆ. ಬಿಕನಾಶಿ ಕಾಂಗ್ರೆಸ್ ನವರು‌ ದೇಶಕ್ಕೆ 60 ವರ್ಷ ಏನು ಮಾಡಿದ್ದಾರೆ ಹೇಳಲಿ? ರಾಹುಲ್ ಗಾಂಧಿ ಹಿಂದೂ ಅಲ್ಲ, ಸೋನಿಯಾ ಗಾಂಧಿ ಹಿಂದೂ ಅಲ್ಲ, ‘ಮಿಕ್ಸ್‌ ವೆಜಿಟೇಬಲ್’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT