ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ ಜಿಲ್ಲೆಯ ಸಹಕಾರಿ ಚಳವಳಿ ಗಟ್ಟಿ: ಮಂಜುಳಾ ಎಸ್‌.

Published 7 ಜನವರಿ 2024, 7:50 IST
Last Updated 7 ಜನವರಿ 2024, 7:50 IST
ಅಕ್ಷರ ಗಾತ್ರ

ಬೀದರ್‌: ‘ಜಿಲ್ಲೆಯಲ್ಲಿ ಸೌಹಾರ್ದ ಸಹಕಾರಿ ಚಳವಳಿ ಗಟ್ಟಿಯಾಗಿದೆ. ಸಹಕಾರ ಸಂಘಗಳ ವ್ಯವಹಾರವೂ ಉತ್ತಮವಾಗಿದೆ’ ಎಂದು ಸಹಕಾರ ಇಲಾಖೆಯ ಉಪನಿಬಂಧಕಿ ಮಂಜುಳಾ ಎಸ್‌. ತಿಳಿಸಿದರು.

ಕರ್ನಾಟಕ ರಾಜ್ಯ ಸೌಹಾರ್ದ  ಸಂಯುಕ್ತ ಸಹಕಾರಿ ಕಲಬುರಗಿ ಪ್ರಾಂತೀಯ ಕಚೇರಿಯಿಂದ ನಗರದಲ್ಲಿ ಶನಿವಾರ ಜಿಲ್ಲೆಯ ಸೌಹಾರ್ದ ಸಹಕಾರಿಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಏರ್ಪಡಿಸಿದ್ದ ಸೌಹಾರ್ದ ಸಹಕಾರಿಗಳ ವ್ಯವಹಾರ ಅಭಿವೃದ್ಧಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.

ಉತ್ತಮ ಸಾಧನೆ ಮಾಡುತ್ತಿರುವ ಸಹಕಾರಿ ಸಂಘಗಳ ಮಾದರಿಯಲ್ಲಿ ಇನ್ನುಳಿದ ಸಹಕಾರಿಗಳು ತಮ್ಮ ವ್ಯವಹಾರ ಹೆಚ್ಚಿಸಿಕೊಳ್ಳಬೇಕು. ಇಂತಹ ಕಾರ್ಯಾಗಾರಗಳಲ್ಲಿ ಭಾಗವಹಿಸಿ, ಆಡಳಿತ ಮಂಡಳಿಗಳೊಂದಿಗೆ ಚರ್ಚಿಸಿ ಯೋಜನೆಗಳನ್ನು ರೂಪಿಸಬೇಕೆಂದು ಸಲಹೆ ನೀಡಿದರು.

ಸಹಕಾರ ಸಂಘಗಳು ತಮ್ಮ ಆರ್ಥಿಕ ಚಟುವಟಿಕೆ ಕೈಗೊಳ್ಳುವ ಪೂರ್ವದಲ್ಲಿ ವಾರ್ಷಿಕ ಕ್ರಿಯಾ ಯೋಜನೆ ಹಾಕಿಕೊಂಡಾಗ ಲಾಭ ಗಳಿಸಬಹುದು ಎಂದು ಸಂಯುಕ್ತ ಸಹಕಾರಿ ನಿರ್ದೇಶಕ ಗುರುನಾಥ ಜ್ಯಾಂತಿಕರ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಪ್ರಾಂತೀಯ ವ್ಯವಸ್ಥಾಪಕ ಸೂರ್ಯಕಾಂತ ರಾಕಲೇ ಮಾತನಾಡಿ, ಜಿಲ್ಲೆಯ ಸೌಹಾರ್ದ ಸಹಕಾರಿ ವ್ಯವಹಾರವು ಕಳೆದ ಸಾಲಿನಲ್ಲಿ ವೃದ್ಧಿಯಾಗಿದೆ. ಆದರೆ, ಕೆಲವು ಸಹಕಾರಿಗಳ ವ್ಯವಹಾರ ಕುಂಠಿತವಾಗಿದೆ. ಇಂತಹ ಕಾರ್ಯಾಗಾರಗಳಿಂದ ಸರಿಪಡಿಸಿಕೊಳ್ಳಲು ಸಹಾಯವಾಗುತ್ತದೆ ಎಂದರು.

ಸೌಹಾರ್ದ ಅಭಿವೃದ್ಧಿ ಅಧಿಕಾರಿ ವೀರಶಟ್ಟಿ ಕಾಮಣ್ಣಾ, ಒಕ್ಕೂಟದ ಸಿ.ಇ.ಒ ಅಮೃತ ಹೊಸಮನಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT