ಮಂಗಳವಾರ, 20 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ | ಸಂವಿಧಾನ ಅಭಿಯಾನ ಉತ್ಸವ

Published 27 ನವೆಂಬರ್ 2023, 14:30 IST
Last Updated 27 ನವೆಂಬರ್ 2023, 14:30 IST
ಅಕ್ಷರ ಗಾತ್ರ

ಬೀದರ್‌: ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಒಳಮೀಸಲಾತಿ ವರ್ಗೀಕರಣ, ಸಂವಿಧಾನ ಅಭಿಯಾನ ಉತ್ಸವ ಹಾಗೂ ದಲಿತ ವಿಮೋಚನಾ ಸೇನೆಯ ಸಮಾವೇಶ ಭಾನುವಾರ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸೇನೆಯ ಸಂಸ್ಥಾಪಕ ಅಧ್ಯಕ್ಷ ಮುನಿರಾಜು,‘ಸಂವಿಧಾನದ ಬಗ್ಗೆ ಹೆಚ್ಚೆಚ್ಚೂ ಪ್ರಚಾರ ಕಾರ್ಯ ಕೈಗೊಳ್ಳಬೇಕು. ಅದೊಂದು ಅಭಿಯಾನ, ಉತ್ಸವದ ರೀತಿಯಲ್ಲಿ ನಡೆಸಿ, ಜನರಿಗೆ ತಿಳಿಸಬೇಕಿದೆ’ ಎಂದರು.

ಸಂವಿಧಾನ ದಿನಾಚರಣೆ ಅಂಗವಾಗಿ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ಒಂದು ದಿನಕ್ಕೆ ಸೀಮಿತವಾಗಬಾರದು ಎಂದು ತಿಳಿಸಿದರು.

ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಳವಾ ನಾರಾಯಣಸ್ವಾಮಿ, ಜಿಲ್ಲಾ ಮಾದಿಗ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುಮಂತ ಕಟ್ಟಿಮನಿ ಅವರು ಸಂವಿಧಾನದ ಪೀಠಿಕೆ ಓದಿದರು.

ಸೇನೆಯ ರಾಜ್ಯ ಉಪಾಧ್ಯಕ್ಷ ದಯಾನಂದ ವಕೀಲ, ಜಿಲ್ಲಾಧ್ಯಕ್ಷ ಮಾರುತಿ ಸೂರ್ಯವಂಶಿ, ಉಪಾಧ್ಯಕ್ಷರಾದ ಸುನೀಲ ಹುಡಗಿ, ರಮೇಶ ಕಣಜಿಕರ್, ಹುಮನಾಬಾದ್‌ ತಾಲ್ಲೂಕು ಗೌರವ ಅಧ್ಯಕ್ಷ ರಾಜು ಕಾಣೆ, ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ ಮೂಲಿಮನಿ, ಉಪಾಧ್ಯಕ್ಷ ಸಮೀವುಲ್ಲಾ, ಭಾಲ್ಕಿ ತಾಲ್ಲೂಕು ಅಧ್ಯಕ್ಷ ರಾಜಕುಮಾರ ಎಂ.ಪಿ., ಔರಾದ್‌ ತಾಲ್ಲೂಕು ಅಧ್ಯಕ್ಷ ವಿಜಯಕುಮಾರ ಹೆಡಗಾಪುರೆ, ಬಸವಕಲ್ಯಾಣ ತಾಲ್ಲೂಕು ಅಧ್ಯಕ್ಷ ವಿಜಯಭಾಸ್ಕರ್ ದೌಲೆ, ಉಪಾಧ್ಯಕ್ಷ ಸಂಜುಕುಮಾರ ಭಾಸ್ಕರ್ ಹಾಗೂ ಪ್ರಧಾನ ಕಾರ್ಯದರ್ಶಿ ವಿಕಾಸ ಟಿ.ಹಿರೋಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT