ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈನುಗಾರಿಕೆ; ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಿ

ತರಬೇತಿ ಕಾರ್ಯಕ್ರಮ; ಡಾ.ರವೀಂದ್ರ ಭೂರೆ ಹೇಳಿಕೆ
Last Updated 1 ಆಗಸ್ಟ್ 2022, 14:15 IST
ಅಕ್ಷರ ಗಾತ್ರ

ಬೀದರ್: ‘ಹೈನುಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ರೈತರು ಅಧಿಕ ಲಾಭ ಪಡೆಯಲು ಪ್ರಯತ್ನಿಸಬೇಕು’ ಎಂದು ಉಪ ನಿರ್ದೇಶಕ ಡಾ. ರವೀಂದ್ರ ಭೂರೆ ಹೇಳಿದರು.

ನಗರದ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರದಲ್ಲಿ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ರಿಲಯನ್ಸ್ ಫೌಂಡೇಷನ್ ಸಹಯೋಗದಲ್ಲಿ ರೈತರಿಗೆ ಏರ್ಪಡಿಸಿದ್ದ ಆಧುನಿಕ ಪಶು ಪಾಲನೆ ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಜಾನುವಾರುಗಳೊಂದಿಗೆ ಆಡು, ಕುರಿ, ಕೋಳಿಗಳನ್ನು ಸಾಕಾಣಿಕೆ ಮಾಡಿದರೆ ಇನ್ನು ಹೆಚ್ಚಿನ ಆದಾಯ ಪಡೆಯಲು ಸಾಧ್ಯವಿದೆ. ಈ ಮೂಲಕ ಕುಟುಂಬದ ಆರ್ಥಿಕ ಮಟ್ಟವನ್ನೂ ಸುಧಾರಿಸಿಕೊಳ್ಳಬಹುದು’ ಎಂದು ಸಲಹೆ ನೀಡಿದರು.

‘ಹೈನು ರಾಸುಗಳ ಆಯ್ಕೆ, ಕಡಿಮೆ ಬಂಡವಾಳದ ಮೂಲಕ ಪಶು ಆಹಾರ ತಯಾರಿಕೆ, ಹೈನು ಜಾನುವಾರುಗಳ ಆರೋಗ್ಯ ಕಾಳಜಿ, ಮಾರುಕಟ್ಟೆ, ರಾಸುಗಳ ನಿರ್ವಹಣೆ ಬಗ್ಗೆ ರೈತರು ಸರಿಯಾಗಿ ಅರಿತುಕೊಳ್ಳಬೇಕು’ ಎಂದು ಡಾ.ಯೋಗೇಂದ್ರ ಕುಲಕರ್ಣಿ ಹೇಳಿದರು.

ಡಾ. ದೇವಾನಂದ ತಗಾಲೆ, ಡಾ. ವಿಕ್ರಂ ಚಾಕೋತೆ ಉಪನ್ಯಾಸ ನೀಡಿದರು. ನಂತರ ಭಾಲ್ಕಿ ತಾಲ್ಲೂಕಿನ ಕಟ್ಟಿತೂಗಾಂವ ಹತ್ತಿರದ ದೇವಣಿ ಜಾನುವಾರು ಸಂಶೋಧನೆ ಹಾಗು ಮಾಹಿತಿ ಕೇಂದ್ರಕ್ಕೆ ಒಯ್ದು ಕ್ಷೇತ್ರ ದರ್ಶನ ಮಾಡಿಸಲಾಯಿತು.

ಡಾ. ವಿಜಯಕುಮಾರ ಕುಲಕರ್ಣಿ ಹಾಗೂ ಡಾ ಪ್ರಕಾಶಕುಮಾರ ರಾಠೋಡ್ ಅವರು ರೈತರಿಗೆ ಸುಧಾರಿತ ಮೇವಿನ ಬೆಳೆಗಳು, ಬಹು ವಾರ್ಷಿಕ ಹೈಬ್ರೀಡ್ ನೇಪಿಯರ್, ಗಿನಿ ಹುಲ್ಲು, ರೋಡ್ಸ್ ಹುಲ್ಲು, ಕುದುರೆ ಮೆಂತೆ, ದಶರಥ ಹುಲ್ಲು, ಸ್ಟೈಲೊ, ಚೊಗಚೆ, ಸುಪರ್ ನೇಪಿಯರ್, ಹೈನುಗಾರಿಕೆ ಘಟಕ, ಬಂಧನ ಮುಕ್ತ ಕೊಟ್ಟಿಗೆ, ದೇವಣಿ ತಳಿಗಳು ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.

ತರಬೇತಿಯಲ್ಲಿ ಔರಾದ್ ತಾಲ್ಲೂಕಿನ ನಾರಾಯಣಪುರ, ದುಡುಕುನಾಳ್, ಭಾಲ್ಕಿ ತಾಲ್ಲೂಕಿನ ಭಾತಂಬ್ರಾ, ನಿಡೇಬನ್, ಬಸವಕಲ್ಯಾಣ ತಾಲ್ಲೂಕಿನ ದೇವನಾಳ, ಮುಚಳಂಬ 130 ರೈತರು ಪಾಲ್ಗೊಂಡಿದ್ದರು. ಎಲ್ಲ ರೈತರಿಗೆ ತರಬೇತಿ ಪ್ರಮಾಣ ಪತ್ರ ನೀಡಲಾಯಿತು.

ಮುಖ್ಯ ಪಶು ವೈದ್ಯಾಧಿಕಾರಿ ಡಾ.ಗೌತಮ ಅರಳಿ, ಡಾ. ಓಂಕಾರ ಪಾಟೀಲ, ಡಾ. ಚಂದ್ರಶೇಖರ ಪಾಟೀಲ, ಶಿವಾನಂದ ಮಠಪತಿ, ರಾಮಚಂದ್ರ ಶೇರಿಕಾರ್, ಸಂಗಪ್ಪ ಅತಿವಾಳೆ, ಮಲ್ಲಿಕಾರ್ಜುನ, ಅರ್ಜುನ ಮಾಸಿಮಾಡೆ, ಮಲ್ಲಪ್ಪ ಗೌಡ, ಗುರುಪ್ರಸಾದ ಮೆಂಟೆ, ಪ್ರೇಮಸಾಗರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT