ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜನವಾಡ | ನೀಟ್‍ ಸಾಧನೆ: ಕೊರಮ ಸಮಾಜ ವಿದ್ಯಾರ್ಥಿಗಳಿಗೆ ಸನ್ಮಾನ

Published 11 ಜೂನ್ 2024, 15:41 IST
Last Updated 11 ಜೂನ್ 2024, 15:41 IST
ಅಕ್ಷರ ಗಾತ್ರ

ಜನವಾಡ: ಜಿಲ್ಲಾ ಕೊರಮ(ಕೊರವ) ಸಮಾಜ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬೀದರ್ ತಾಲ್ಲೂಕಿನ ಜನವಾಡದಲ್ಲಿ ಮಂಗಳವಾರ ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯಲ್ಲಿ ಉತ್ತಮ ರ‍್ಯಾಂಕ್ ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ನೀಟ್‍ನಲ್ಲಿ ಪರಿಶಿಷ್ಟ ಜಾತಿ ವಿಭಾಗದಲ್ಲಿ ಕ್ರಮವಾಗಿ 724ನೇ ರ‍್ಯಾಂಕ್, 2,239ನೇ ರ‍್ಯಾಂಕ್ ಮತ್ತು 7,622ನೇ ರ‍್ಯಾಂಕ್ ಪಡೆದ ಓಂಕಾರ ತುಕಾರಾಮ, ಕೃಷ್ಣ ಸಂಜೀವಕುಮಾರ ಹಾಗೂ ದೀಪಕ್ ಶಾಮಣ್ಣ ಅವರನ್ನು ಶಾಲು ಹೊದಿಸಿ, ಕೃತಿ ನೀಡಿ ಗೌರವಿಸಲಾಯಿತು.

ಛಲವಿದ್ದಲ್ಲಿ ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ ಎನ್ನುವುದಕ್ಕೆ ನೀಟ್‍ನಲ್ಲಿ ಸಾಧನೆಗೈದ ಜನವಾಡದ ಮೆಕ್ಯಾನಿಕ್ ತುಕಾರಾಮ ಅವರ ಪುತ್ರ ಓಂಕಾರ ಅವರೇ ನಿದರ್ಶನ ಎಂದು ಜಿಲ್ಲಾ ಕಾರಾಗೃಹದ ಜೇಲರ್ ತಿಮ್ಮಣ್ಣ ಭಜಂತ್ರಿ ಹೇಳಿದರು.

ನೀಟ್‍ನಲ್ಲಿ ಉತ್ತಮ ರ‍್ಯಾಂಕ್‌ ಗಳಿಸಿದ ಕೊರಮ ಸಮಾಜದ ವಿದ್ಯಾರ್ಥಿಗಳಿಗೆ ಪುಸ್ತಕ ಕೊಂಡುಕೊಳ್ಳಲು ಧನ ಸಹಾಯ ಮಾಡಲಾಗುವುದು ಎಂದು ತಿಳಿಸಿದರು.‌

ಜಿಲ್ಲಾ ಕೊರಮ (ಕೊರವ) ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಸಂಜುಕುಮಾರ ಬೇಲೂರ, ಸಹ ಶಿಕ್ಷಕ ನಾರಾಯಣ ಕೊನಸಾರೆ ಮಾತನಾಡಿದರು.

ಸಂಘದ ಗೌರವಾಧ್ಯಕ್ಷ ವಿಶ್ವನಾಥ ಜಾಧವ್, ಅಧ್ಯಕ್ಷ ಸಂತೋಷ ಕೊರವ, ಕಾರ್ಯಾಧ್ಯಕ್ಷ ನಾಗೇಶ ಕೈಕಾಡಿ, ಉಪಾಧ್ಯಕ್ಷ ಸಂಜು ಯರಂಡಿ, ಪ್ರಮುಖರಾದ ಮನೋಜ್ ಮಾನೆ, ರವೀಂದ್ರ ಬಂಗೆ, ಸಂತೋಷ ಬಂಗೆ, ಶಂಕರ ಬಂಗೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT