ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಸಾಲದ ಮೇಲಿನ ಬಡ್ಡಿ ಮನ್ನಾ ಹಣ ಸೈನಿಕ ಕಲ್ಯಾಣ ಖಾತೆಗೆ ನೀಡಿದ ರೈತ

Last Updated 23 ಸೆಪ್ಟೆಂಬರ್ 2021, 3:16 IST
ಅಕ್ಷರ ಗಾತ್ರ

ಔರಾದ್: ಇಲ್ಲಿಯ ರೈತೊಬ್ಬರು ಕೃಷಿ ಸಾಲದ ಮೇಲಿನ ಬಡ್ಡಿ ಮನ್ನಾ ಹಣವನ್ನು ಸೈನಿಕ ಕಲ್ಯಾಣ ನಿಧಿಗೆ ಕೊಡುವ ಮೂಲಕ ದೇಶದ ಬಗ್ಗೆ ಕಳಕಳಿ ಮೆರೆದಿದ್ದಾರೆ.

ವಿಶ್ವ ಕಲ್ಯಾಣ ಚಾರಿಟಬಲ್ ಟ್ರಸ್ಟ್ ಮೂಲಕ ಜನ ಕಲ್ಯಾಣ ಕಾರ್ಯದಲ್ಲಿ ತೊಡಗಿಸಿಕೊಂಡ ಅಡಿವೆಪ್ಪ ಪಟ್ನೆ ಅವರು ಡಿಸಿಸಿ ಬ್ಯಾಂಕ್‍ನಿಂದ ₹1 ಲಕ್ಷ ಕೃಷಿ ಸಾಲ ಪಡೆದಿದ್ದರು. ಈ ಸಾಲದ ಮೇಲಿನ ₹3000 ಬಡ್ಡಿ ಮನ್ನಾ ಆಗಿದೆ. ಈ ಮನ್ನಾ ಮಾಡಿದ ಹಣವನ್ನು ಡಿಡಿ ಮೂಲಕ ಸೈನಿಕ ಕಲ್ಯಾಣ ನಿಧಿಗೆ ಕಳುಹಿಸಿಕೊಟ್ಟಿದ್ದಾರೆ.

ಸ್ಥಳೀಯ ಅಮರೇಶ್ವರ ಕಾಲೇಜಿನಲ್ಲಿ ಗುಮಾಸ್ತರಾಗಿದ್ದ ಆಡಿವೆಪ್ಪ ಪಟ್ನೆ ಅವರು 2014ರಲ್ಲಿ ನಿವೃತ್ತರಾಗಿದ್ದಾರೆ. ಅಲ್ಲಿಂದ ಪ್ರತಿ ವರ್ಷ ಸೈನಿಕ ಕಲ್ಯಾಣ ಖಾತೆಗೆ ₹1,100 ಜಮಾ ಮಾಡುತ್ತಾ ಬಂದಿದ್ದಾರೆ. ಬಸವತತ್ವ ಅನುಯಾಯಿಯಾದ ಅವರು ಬಿಡುವಿನ ವೇಳೆಯಲ್ಲಿ ಕೃಷಿ ಕಾಯಕದ ಜತೆಗೆ ಹಳ್ಳಿ ಹಳ್ಳಿಗೆ ಹೋಗಿ ಬಸವತತ್ವ ಪ್ರಚಾರ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT