ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪವರ್‌ ಗ್ರೀಡ್‌ ಸ್ಥಾಪನೆಗೆ ರೈತರ ವಿರೋಧ

ಯೋಜನೆ ಕೈಬಿಡದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ ಡೊಂಗರಗಾಂವ ರೈತರು
Published 13 ಫೆಬ್ರುವರಿ 2024, 8:47 IST
Last Updated 13 ಫೆಬ್ರುವರಿ 2024, 8:47 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಬೀದರ್‌: ಔರಾದ್‌ ತಾಲ್ಲೂಕಿನ ಡೊಂಗರಗಾಂವ ಗ್ರಾಮದಲ್ಲಿ ಪವರ್‌ ಗ್ರೀಡ್‌ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನಾ ರ್‍ಯಾಲಿ ನಡೆಸಿದರು.

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್‍ಯಾಲಿ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಡೊಂಗರಗಾಂವ ಗ್ರಾಮದಲ್ಲಿ ಪವರ್‌ ಗ್ರೀಡ್‌ ಸ್ಥಾಪನೆಗೆ ಜಿಲ್ಲಾಡಳಿತ ಇತ್ತೀಚೆಗೆ ರೈತರ ಜಮೀನು ಕೇಳಿತ್ತು. ಆದರೆ, ರೈತರು ಅದನ್ನು ನಿರಾಕರಿಸಿದ್ದಾರೆ. ಗ್ರಾಮದಲ್ಲಿ ರೈತರಿಗೆ ಸೇರಿದ ಅಲ್ಪ ಜಮೀನಿದೆ. ಉಪಜೀವನಕ್ಕೆ ಅದೊಂದೇ ದಾರಿ ಇದೆ. ಎಷ್ಟೇ ಹಣ ಕೊಟ್ಟರೂ ರೈತರು ಜಮೀನು ಕೊಡಲು ನಿರಾಕರಿಸಿದ್ದಾರೆ. ಹೀಗಾಗಿ ಡೊಂಗರಗಾಂವ ಬದಲು ಬೇರೆ ಕಡೆ ಪವರ್‌ ಗ್ರೀಡ್‌ ಸ್ಥಾಪಿಸಬೇಕೆಂದು ಆಗ್ರಹಿಸಿದ್ದಾರೆ.

ಹೆಚ್ಚಿನ ರೈತರು ಯಾವುದೇ ಯೋಜನೆಗೆ ವಿರೋಧ ವ್ಯಕ್ತಪಡಿಸಿದರೆ ಅದನ್ನು ಕೈಬಿಡಬೇಕು ಎಂದು ಭೂಸ್ವಾಧೀನ ಕಾಯ್ದೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಪವರ್‌ ಗ್ರೀಡ್‌ ಸ್ಥಾಪನೆಗೆ ಹೆಚ್ಚಿನ ರೈತರ ವಿರೋಧ ಇರುವುದರಿಂದ ಯೋಜನೆ ಕೈಬಿಡಬೇಕು. ಇಲ್ಲವಾದಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ, ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ, ಉಪಾಧ್ಯಕ್ಷರಾದ ಚಂದ್ರಶೇಖರ ಜಮಖಂಡಿ, ‌‌ಶಂಕರೆಪ್ಪ ಪಾರಾ, ರಾಜ್ಯ ಪ್ರತಿನಿಧಿ ಶೇಷರಾವ ಕಣಜಿ, ಪ್ರಮುಖರಾದ ಪ್ರಕಾಶ ಬಾವಗೆ, ಪ್ರವೀಣ ಕುಲಕರ್ಣಿ, ಬಾಬುರಾವ ಜೋಳದಾಬಕಾ, ಶಂಕರೆಪ್ಪ ಪಾರಾ, ಸತೀಶ ನನ್ನೂರೆ, ಶಂಕ್ರೆಪ್ಪ ಪಾಟೀಲ ಅತಿವಾಳ, ವಿಠಲರಾವ ಪಾಟೀಲ, ಸುಭಾಷ ರಗಟೆ, ಕಲ್ಲಪ್ಪಾ ದೇಶಮುಖ, ರಿಯಾಜ್‌ ಪಟೇಲ್, ನಾಗಯ್ಯ ಸ್ವಾಮಿ, ಮಲ್ಲಿಕಾರ್ಜುನ ಚಕ್ಕಿ, ಉತ್ತಮರಾವ ಮಾನೆ, ಸತ್ಯವಾನ ಪಾಟೀಲ, ಪ್ರಭುದಾಸ ಸಂತಪೂರ, ರಾಜಕುಮಾರ ಪಾಟೀಲ, ಬಸಪ್ಪ ಆಲೂರೆ, ಗೋವಿಂದ ಲೋಣೆ, ರಮೇಶ ಮೋರ್ಗೆ, ಸಿದ್ರಾಮ ಕಲಬುರಗೆ, ಧೂಳಪ್ಪ ಆಣದೂರ, ಸುಮಂತ ಗ್ರಾಮಲೆ, ವಿಶ್ವನಾಥ ಧರಣೆ, ಹಣಮಂತ ಬೋರಾಳ, ಝರಣಪ್ಪ ದೇಶಮುಖ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT