ಗುತ್ತೆ ಚಿತ್ರಕಲಾ ಪ್ರದರ್ಶನ ಆರಂಭ

7

ಗುತ್ತೆ ಚಿತ್ರಕಲಾ ಪ್ರದರ್ಶನ ಆರಂಭ

Published:
Updated:
Deccan Herald

ಬೀದರ್: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕಲಾವಿದ ಪ್ರವೀಣ ಎ. ಗುತ್ತೆ ಅವರ ಚಿತ್ರಕಲಾ ಪ್ರದರ್ಶನ ನಗರದ ಮೈಲೂರು ರಸ್ತೆಯಲ್ಲಿ ಇರುವ ಡಾ. ಎಸ್.ಎಂ. ಪಂಡಿತ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಗುರುವಾರ ಆರಂಭಗೊಂಡಿತು.

ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ ಉದ್ಘಾಟಿಸಿ ಮಾತನಾಡಿ, ‘ಚಿತ್ರಕಲೆಗೆ ತನ್ನದೇ ಆದ ಮಹತ್ವ ಇದೆ. ಕಲಾವಿದ ಸಮಾಜದ ಕನ್ನಡಿ. ಸಾವಿರ ಪದಗಳಲ್ಲಿ ಹೇಳಿದ್ದನ್ನು ಕಲಾವಿದ ಒಂದೇ ಚಿತ್ರದ ಮೂಲಕ ಹೇಳಬಲ್ಲ’ ಎಂದು ತಿಳಿಸಿದರು.

ರೇಣುಕಾ ಎಂ. ಮರೂರಕರ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಉಮಾಕಾಂತ ಮೀಸೆ, ಶ್ರೀಕಾಂತ ಬಿರಾದಾರ, ಎಂ.ಡಿ. ಷರೀಫ್, ಸಂದೀಪ ಸಜ್ಜನ್, ಕಲಾವಿದ ಪ್ರವೀಣ ಗುತ್ತೆ ಇದ್ದರು.

ಗೌತಮ ಬುದ್ಧ, ನಿಸರ್ಗ ಸೇರಿದಂತೆ ವಿವಿಧ ಕಲಾಕೃತಿಗಳು ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿವೆ. ಪ್ರದರ್ಶನ ಶುಕ್ರವಾರವೂ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !