ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ | ಹಣಕ್ಕೆ ಬೇಡಿಕೆ: ಹುಲಸೂರ ಠಾಣೆಎಎಸ್‌ಐ ಅಮಾನತು

Published 22 ಫೆಬ್ರುವರಿ 2024, 4:39 IST
Last Updated 22 ಫೆಬ್ರುವರಿ 2024, 4:39 IST
ಅಕ್ಷರ ಗಾತ್ರ

ಬೀದರ್‌: ವ್ಯಕ್ತಿಯೊಂದಿಗೆ ಅನುಚಿತವಾಗಿ ವರ್ತಿಸಿ, ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಹುಲಸೂರ ಪೊಲೀಸ್‌ ಠಾಣೆ ಎಎಸ್‌ಐ ಶಾವುರಾಜ್‌ ಅವರನ್ನು ಬುಧವಾರ ಕೆಲಸದಿಂದ ಅಮಾನತಗೊಳಿಸಲಾಗಿದೆ.

‘ಹುಲಸೂರ ತಾಲ್ಲೂಕಿನ ಬೇಲೂರು ಗ್ರಾಮದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಕಬ್ಬು ಸುಟ್ಟು ಹೋಗಿರುವ ಬಗ್ಗೆ ದೂರು ಕೊಡಲು ಠಾಣೆಗೆ ಹೋಗಿದ್ದರು. ಎಎಸ್‌ಐ ಶಾವುರಾಜ್‌ ಅವರು ಸ್ಥಳಕ್ಕೆ ಪಂಚನಾಮೆಗೆ ತೆರಳಿದ್ದಾಗ ದೂರುದಾರ ವ್ಯಕ್ತಿಯೊಂದಿಗೆ ಅನುಚಿತವಾಗಿ ವರ್ತಿಸಿ, ಹಣಕ್ಕೆ ಬೇಡಿಕೆ ಇಟ್ಟಿರುವುದು ಪ್ರಾಥಮಿಕ ವಿಚಾರಣೆಯಿಂದ ಗೊತ್ತಾಗಿದೆ. ಈ ಕುರಿತ ವಿಡಿಯೊ ತುಣುಕುಗಳಿಂದ ಇದು ಸಾಬೀತಾಗಿದೆ. ಕೆಲಸದಲ್ಲಿ ಬೇಜವಾಬ್ದಾರಿ ಹಾಗೂ ದುರ್ನಡತೆ ತೋರಿಸಿದ್ದಕ್ಕೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT