ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌: ನಗರಸಭೆ ಸದಸ್ಯರಿಂದ ಬೆಂಬಲ ಕೋರಿದ ಖೂಬಾ

Published 17 ಮಾರ್ಚ್ 2024, 15:55 IST
Last Updated 17 ಮಾರ್ಚ್ 2024, 15:55 IST
ಅಕ್ಷರ ಗಾತ್ರ

ಬೀದರ್‌: ಕೇಂದ್ರ ಸಚಿವ ಭಗವಂತ ಖೂಬಾ ಅವರು ನಗರದಲ್ಲಿ ಭಾನುವಾರ ಬಿಜೆಪಿಗೆ ಸೇರಿದ ನಗರಸಭೆ ಹಾಲಿ ಹಾಗೂ ಮಾಜಿ ಸದಸ್ಯರನ್ನು ಭೇಟಿ ಮಾಡಿ, ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದರು.

ಕಳೆದ ಹತ್ತು ವರ್ಷಗಳಲ್ಲಿ ಬೀದರ್‌ ಲೋಕಸಭಾ ಕ್ಷೇತ್ರದ ಸಂಸದನಾಗಿ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಬೀದರ್‌ ನಗರದಲ್ಲಿ ₹275 ಕೋಟಿ ಅನುದಾನದಲ್ಲಿ ಅಮೃತ ಯೋಜನೆಯಡಿ ಆರು ಉದ್ಯಾನಗಳ ನಿರ್ಮಾಣವಾಗಿದೆ. ನಗರದಾದ್ಯಂತ ಯು.ಜಿ.ಡಿ ಕಾಮಗಾರಿ ನಡೆಯುತ್ತಿದೆ ಎಂದು ಖೂಬಾ ಹೇಳಿದರು.

₹125 ಕೋಟಿ ಅನದಾನದಲ್ಲಿ ಸಿ.ಎನ್.ಜಿ. ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದೆ. ಕೆಲವೇ ದಿನಗಳಲ್ಲಿ ನಗರದ ಮನೆ ಮನೆಗಳಿಗೆ ಪೈಪ್‌ ಮೂಲಕ ಅಡುಗೆ ಅನಿಲ ಸರಬರಾಜು ಆಗಲಿದೆ. ಈ ವ್ಯವಸ್ಥೆ ಕಲ್ಯಾಣ ಕರ್ನಾಟಕ ಭಾಗದ ಯಾವುದೇ ಜಿಲ್ಲೆಯಲ್ಲಿ ಇಲ್ಲ. ಇಂತಹ ಸೌಲಭ್ಯಗಳು ಬೀದರ್‌ ನಗರದ ಜನತೆಗೆ ಮಾಡಿಕೊಟ್ಟಿದ್ದೇನೆ ಎಂದರು.

ರಾಜ್ಯದಲ್ಲಿ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಬೀದರ್‌ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲು ಶ್ರಮಿಸಿದ್ದೇನೆ. ನಗರದಾದ್ಯಂತ ಒಪನ್ ಜಿಮ್‌ಗಳು ಮಾಡಿಸಿದ್ದೇನೆ. ಮತ್ತೆ ಸಂಸದನಾಗಿ ಆಯ್ಕೆ ಮಾಡಿದರೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ ಎಂದು ಭರವಸೆ ನೀಡಿದರು.

ರಾಜಕುಮಾರ ಚಿದ್ರಿ, ಶಶಿಧರ ಹೊಸಳ್ಳಿ, ಸಂಗಮೇಶ ನಾಸಿಗಾರ, ಶಿವಪುತ್ರ ವೈದ್ಯ, ರಾಜು ಬಿರಾದರ, ನವೀನ್‌ ಚಿಟ್ಟಾ, ವಾಸು ದತ್ತಾತ್ರಿ, ಬಸವರಾಜ ಪವಾರ, ಬಸವರಾಜ ಮಲಕಪನೋರ, ಸಂಗಮೇಶ ಗುಮ್ಮಾ, ಸಂಗಮೇಶ ಹುಮನಾಬಾದೆ, ಸುದರ್ಶನ, ಅರವಿಂದ ಪಾಟೀಲ ಚಿಮಕೋಡ, ದೀಪಕ ಚಿದ್ರಿ, ಗುಣವಂತ ಭಾವಿಕಟ್ಟಿ, ಭೂಷಣ ಪಾಠಕ, ನರೇಶ ಗೌಳಿ, ಶೀಲವಂತ, ಸಂಜು ಘಣತೆ, ಸಂತೋಷ ಜ್ಯಾಂತಿ, ಪ್ರಭು ಶಿರಸಂದ, ರೋಷನ್ ವರ್ಮಾ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT